ಮೈಸೂರು: ಲಾರಿ-ಬೈಕ್ ನಡುವೆ ಡಿಕ್ಕಿ ಸ್ನೇಹಿತರ ಮನೆಗೆ ಊಟಕ್ಕೆ ತೆರಳಿದ್ದ ನಾಲ್ವರು ದುರ್ಮರಣ 
ರಾಜ್ಯ

ಮೈಸೂರು: ಲಾರಿ-ಬೈಕ್ ನಡುವೆ ಡಿಕ್ಕಿ ಸ್ನೇಹಿತರ ಮನೆಗೆ ಊಟಕ್ಕೆ ತೆರಳಿದ್ದ ನಾಲ್ವರು ದುರ್ಮರಣ

ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಬಳಿ ನಡೆದಿದೆ.

ಮೈಸೂರು: ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ  ತಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಬಳಿ ನಡೆದಿದೆ.
ಘಟನೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕಂದೇಗಾಲ ನಿವಾಸಿ ರಾಘವೇಂದ್ರ (25), ಕಂಚಮಳ್ಳಿ ನಿವಾಸಿ ಮಧುಕುಮಾರ್ (19), ನಂಜನಗೂಡು ತಾಲೂಕಿನ ಹುರಾ ಗ್ರಾಮದ ಮಧು ಮತ್ತು ಒಡಿಸ್ಸಾ ಮೂಲದ ಅಹಮ್ಮದ್ ಖಾನ್ ಎನ್ನುವವರು ಸಾವನ್ನಪ್ಪಿದ್ದಾರೆ.
ಇವರೆಲ್ಲರೂ ಸ್ನೇಹಿತನ ಮನೆಗೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿಕೊಂಡು ಹಿಂದಿರುಗುವ ವೇಳೆ ನಡುರಾತ್ರಿಯಲ್ಲಿ ಲಾರಿ ಹಾಗೂ ಬೈಕುಗಳ ನಡುವೆ ಡಿಕ್ಕಿಯಾಗಿದೆ.
ಮೃತರೆಲ್ಲರೂ ಮೈಸೂರಿನ ಹೋಟೆಲ್ ಒಂದರಲ್ಲಿ ಉದ್ಯೋಗದಲ್ಲಿದ್ದರೆಂದು ಮಾಹಿತಿ ಇದೆ.
ಮೃತದೇಹಗಳನ್ನು  ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?