ರಾಜ್ಯ

ಚುನಾವಣಾ ಕರ್ತವ್ಯದ ಬಳಿಕ ಸ್ವಸ್ಥಾನಕ್ಕೆ 16 ಐಎಎಸ್ ಅಧಿಕಾರಿಗಳ ಮರು ನಿಯೋಜನೆ

Srinivasamurthy VN
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವರ್ಗಾವಣೆಗೊಂಡಿದ್ದ 16 ಐಎಎಸ್ ಅಧಿಕಾರಿಗಳನ್ನು ಸ್ವಸ್ಥಾನಕ್ಕೆ ರಾಜ್ಯ ಸರ್ಕಾರ ವರ್ಗಾಯಿಸಿ ಆದೇಶ ಹೊರಡಿಸಿದೆ.
ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದ 18 ಮಂದಿ ಐಎಎಸ್​ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದ ಮೇರೆಗೆ ಬೇರೆ ಬೇರೆ ಸ್ಥಳಗಳಿಗೆ ನಿಯೋಜನೆಗೊಳಿಸಲಾಗಿತ್ತು. ಇದೀಗ ಆ ಅಧಿಕಾರಿಗಳನ್ನು ವಾಪಸ್ ಸ್ವಸ್ಥಾನಕ್ಕೆ ಕರೆಸಿಕೊಳ್ಳಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಂತಿದೆ.
1) ಡಾ. ವಿಶಾಲ್- ಗ್ರಾಮೀಣ ನೀರು ಪೂರೈಕೆ ಆಯುಕ್ತರು
2) ಡಿ ರಂದೀಪ್- ಬಿಬಿಎಂಪಿ, ಹೆಚ್ಚುವರಿ ಆಯುಕ್ತ
3) ಡಾ. ಪಿ ಸಿ ಜಾಫರ್- ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು
4) ಪಿ.ಎ. ಮೇಘನ್ನವರ್, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ
5) ತುಷಾರ್​ ಗಿರಿನಾಥ್- ಬಿಡಬ್ಲ್ಯು ಎಸ್​ಎಸ್​ಬಿ , ಅಧ್ಯಕ್ಷರು
6) ಡಾ. ಲೋಕೇಶ್- ಬಿಬಿಎಂಪಿ ಹಣಕಾಸು ಮತ್ತು ಐಟಿ ವಿಶೇಷ ಆಯುಕ್ತ
7) ಟಿ ಕೆ ಅನಿಲ್ ಕುಮಾರ್- ಪ್ರವಾಸೋಧ್ಯಮ ಇಲಾಖೆ, ಕಾರ್ಯದರ್ಶಿ
8) ಯಶವಂತ್, ಮೈಸೂರು ಪ್ರಾದೇಶಿಕ ಆಯುಕ್ತ
9) ಜಿ. ಲಕ್ಷ್ಮೀಕಾಂತ ರೆಡ್ಡಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗ
10) ಎಸ್.ಎಸ್. ನಕುಲ್, ಜೈವಿಕ ತಂತ್ರಜ್ಞಾನ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರು
11) ಎಸ್.ಬಿ. ಬೊಮ್ಮನಹಳ್ಳಿ, ಬೆಳಗಾವಿ ಜಿಲ್ಲಾಧಿಕಾರಿ
12) ಅವಿನಾಶ್ ಮೆನನ್, ವಾಣಿಜ್ಯ ತೆರಿಗೆಯ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಹೆಚ್ಚುವರಿ ಆಯುಕ್ತ
13) ಎಂ.ಕನಗವಲ್ಲಿ - ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಆಯುಕ್ತರು
14) ಯಲಗೌಡ ಶಿವನಗೌಡ ಪಾಟೀಲ್, ವಿಜಯಪುರ ಜಿಲ್ಲಾಧಿಕಾರಿ
15) ಎನ್​​. ಮಂಜುಶ್ರೀ - ಮಂಡ್ಯ ಜಿಲ್ಲಾಧಿಕಾರಿ
16) ಶಿವಯೋಗಿ ಸಿ ಕಳಸದ್​- ಕೆಎಸ್​ಆರ್​ಟಿಸಿ, ಎಂಡಿ
SCROLL FOR NEXT