ರಾಜ್ಯ

ಕಾರವಾರ: ನೌಕಾನೆಲೆಗೂ ತಟ್ಟಿದ ಜಲಕ್ಷಾಮದ ಬಿಸಿ, ಯುದ್ಧನೌಕೆಗಳ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದು

Raghavendra Adiga
ಕಾರವಾರ: ರಾಜ್ಯಾದ್ಯಂತದ ಜಲಕ್ಷಾಮ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಬರಗಾಲದ ಪರಿಣಾಮ ಏಷ್ಯಾದಲ್ಲೇ ಮೂರನೇ ಅತಿದೊಡ್ಡ ನೌಕಾನೆಲೆ  ಎಂಬ ಕೀರ್ತಿಗೆ ಪಾತ್ರವಾಗಿರುವ ಉತ್ತರ ಕನ್ನಡ ಜಿಲ್ಲೆ ಕಾರವಾರದ ಕದಂಬ ನೌಕಾನೆಲೆಗೆ ಸಹ ತಟ್ಟಿದೆ.
ಜಲಕ್ಷಾಮದ ಕಾರಣದಿಂದ , ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ನೀರಿನ ಅವಶ್ಯಕತೆಗಳನ್ನು ಪೂರೈಸುವುದು ಅಧಿಕಾರಿಗಳ ಪಾಲಿಗೆ ಸವಾಲಾಗಿದೆ. ಇದಕ್ಕಾಗಿ ಅವರು ಕೆಲವು , ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳನ್ನು ಮುಂಬೈಗೆ ಸ್ಥಳಾಂತರಿಸಲು ಯೋಚಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾರವಾರದ ನೌಕಾನೆಲೆ ಇಂತಹಾ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ.
ದೇಶದ ಅತಿದೊಡ್ಡ  ಯುದ್ಧ ನೌಕೆ ವಿಕ್ರಮಾದಿತ್ಯ ಹಡಗು, ಯುದ್ಧ ನೌಕೆಗಳು, ಸಬ್ ಮೆರಿನ್‍ಗಳ ನಿಲ್ದಾಣಗಳು ಇಲ್ಲಿವೆ. ಹೀಗಾಗಿ ಒಂದು ದಿನಕ್ಕೆ ಏನಿಲ್ಲವೆಂದರೂ  ಆರು ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ಇಷ್ತೇ ಅಲ್ಲದೆ ಇಲ್ಲಿನ ನಿವಾಸಿಗಳು, ಮನೆಬಳಕೆಗಾಗಿಯೂ ನೀರಿನ ಅಗತ್ಯವಿದೆ. ಆದರೆ ಈಗ ಕೇವಲ ಒಂದು ಮಿಲಿಯನ್ ಲೀಟರ್ ನೀರು ಸರಬರಾಜಾಗುತ್ತಿದೆ.
ನೌಕಾದಳದ ಮೂಲಗಳು ಹೇಳುವಂತೆ ತೀವ್ರ ನೀರಿನ ಬಿಕ್ಕಟ್ಟನ್ನು ನಿಭಾಯಿಸುವುದು ಕಷ್ಟವಾಗಿದೆ.ಕಳೆದ ವಾರ ಐಎನ್ಎಸ್ ದೀಪಕ್, ಫ್ಲೀಟ್ ಟ್ಯಾಂಕರ್, ಮುಂಬೈನಿಂದ ಕಾರವಾರ ನೆಲೆಗೆ ನೀರನ್ನು ತಂದಿತ್ತು. ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು  ಸಾವಿರಾರು ಲೀಟರ್ ನೀರಿನ ಅಗತ್ಯವಿದೆ. ಆದರೆ ಇದೀಗ ಮುಂದಿನ 4-5 ದಿನಗಳಿಗಾಗುವಷ್ಟು ಮಾತ್ರವೇ ನೀರಿನ ಸಂಗ್ರಹವಿದೆ. ಒಂದೊಮ್ಮೆ ಮಳೆ ವಿಳಂಬವಾದಲ್ಲಿ ನೀರು ಸರಬರಾಜು ಆರಂಭವಾಗದಿದ್ದಲ್ಲಿಅರ್ಧಕ್ಕಿಂತಲೂ ಹೆಚ್ಚು ಹಡಗುಗಳನ್ನು ಮುಂಬೈಗೆ ವರ್ಗಾಯಿಸುವುದು ಅನಿವಾರ್ಯ. ಹಾಗೂ ಪರಿಸ್ಥಿತಿ ಸುಧಾರಿಸುವವರೆಗೆ ಅವುಗಳು ಅಲ್ಲಿಯೇ ನೆಲೆಯೂರಬೇಕಾಗುವುದು.
ಈ ನಡುವೆ ವಿವಿಧ ಹಳ್ಳಿಗಳಿಂದ ಮತ್ತು ಗೋವಾದಿಂದಲೂ ಟ್ಯಾಂಕರ್ ಗಳಲ್ಲಿ ನೀರಿನ ಸರಬರಾಜು ಮಾಡಲಾಗುತ್ತಿದೆ. ಅಂಕೋಲಾ ತಾಲೂಕು ಗಂಗಾವಳಿ ಗ್ರಾಮದಿಂದ ನೌಕಾನೆಲೆಗೆ ನೀರು ಬರುತ್ತದೆ.ದಿ ಒಣಗಿದಾಗ, ನೀರಿನ ಸರಬರಾಜು ಬಹುತೇಕ ನಿಂತು ಹೋಗುತ್ತದೆ.ಇನ್ನು ಕಾರವಾರ, ಅಂಕೋಲ, ಗೋಕರ್ಣ ಸೇರಿ ಅನೇಕ  ಗ್ರಾಮಗಳಿಗೆ ಇದೇ ನದಿ ನೀರು ಸರಬರಾಜಾಗುತ್ತದೆ.
SCROLL FOR NEXT