ಸಂಗ್ರಹ ಚಿತ್ರ 
ರಾಜ್ಯ

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಕನ್ನಡ ವಿರೋಧಿ: ಎಸ್ ಜಿ ಸಿದ್ದರಾಮಯ್ಯ

ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವು ಕನ್ನಡದ ಅಭಿವೃದ್ಧಿಗೆ ವಿರುದ್ಧವಾಗಿದೆ ಎಂದು ಕನ್ನಡ ಅಭಿವೃದ್ಧಿಯ ಪ್ರಾಧಿಕಾರ (ಕೆಎಸ್ಎ) ಅಧ್ಯಕ್ಷ....

ಮೈಸೂರು: ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವು ಕನ್ನಡದ ಅಭಿವೃದ್ಧಿಗೆ ವಿರುದ್ಧವಾಗಿದೆ ಎಂದು ಕನ್ನಡ ಅಭಿವೃದ್ಧಿಯ ಪ್ರಾಧಿಕಾರ (ಕೆಎಸ್ಎ) ಅಧ್ಯಕ್ಷ ಎಸ್. ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಉಪಕ್ರಮವನ್ನು :ಕನ್ನಡ ವಿರೋಧಿ" ಎಂದು ಕರೆದ ಅವರು  ಪ್ರಾಥಮಿಕ ಶಿಕ್ಷಣವನ್ನು ಇಂಗ್ಲಿಷ್ ಮಾದ್ಯಮದಲ್ಲಿ ನೀಡುವ  ಕ್ರಮವು ಪ್ರಾಥಮಿಕ ಶಿಕ್ಷಣದ ಉದ್ದೇಶವನ್ನೇ ಹಾಳುಮಾಡುತ್ತದೆ, ಭವಿಷ್ಯದಲ್ಲಿ ಮಕ್ಕಳ ಉನ್ನತ ಶಿಕ್ಷಣದ ಮೇಲೆ ಇದು ಪರಿಣಾಮ ಮಾಡುತ್ತದೆ. ಕುವೆಂಪು, ಸಿ.ಎನ್.ಆರ್. ರಾವ್ ಮತ್ತು ಯು.ಆರ್. ರಾವ್ ಸೇರಿದಂತೆ ಹಲವು ಮಂದಿ ಕನ್ನಡ ಮಾದ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದಾರೆ" ಅವರು ಹೇಳಿದ್ದಾರೆ.
\
ಪ್ರಸ್ತಾಪಿತ ತ್ರಿಭಾಷಾ ಸೂತ್ರದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮೊದಲ ಮತ್ತು ಎರಡನೆಯ ಭಾಷೆಗಳಾಗಿದ್ದರೆ ಸ್ಥಳೀಯ ಭಾಷೆಗಳು ಸಾಂಕೇತಿಕವಾಗಿರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತ್ರಿಭಾಷಾ ನೀತಿಯ ವಿರುದ್ಧ  ಕುವೆಂಪು ಮಾತನ್ನು ಉಲ್ಲೇಖಿಸಿ ಎಚ್ಚರಿಸಿದ ಸಿದ್ದರಾಮಯ್ಯ  ಜರ್ಮನ್, ಜಪಾನೀಸ್ ಮತ್ತು ಸಂಸ್ಕೃತವನ್ನು ಮೂರನೆಯ ಭಾಷೆಯಾಗಿ ಕಲಿಸುವ ಖಾಸಗಿ ಸಂಸ್ಥೆಗಳು ಶಿಕ್ಷಣವನ್ನು ವಾಣಿಜ್ಯೀಕರಣ ಮಾಡಿ  ಕನ್ನಡಕ್ಕೆ ಬೆದರಿಕೆ ಹಾಕಿವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT