ಸಾಂದರ್ಭಿಕ ಚಿತ್ರ 
ರಾಜ್ಯ

ಮೈಸೂರು: ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಮೇಲ್ವರ್ಗದ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರು- ಊಟಿ ರಸ್ತೆಯ ವೀರಾನಪುರ ಗೇಟ್ ಬಳಿಯ ಗ್ರಾಮದವೊಂದರಲ್ಲಿ ನಡೆದಿದೆ.

ಮೈಸೂರು: ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಮೇಲ್ವರ್ಗದ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರು- ಊಟಿ ರಸ್ತೆಯ   ವೀರಾನಪುರ ಗೇಟ್ ಬಳಿಯ  ಗ್ರಾಮದವೊಂದರಲ್ಲಿ ನಡೆದಿದೆ. ಜೂನ್ 3 ರಂದು ಘಟನೆ ನಡೆದಿದ್ದು,  ದಲಿತ ವ್ಯಕ್ತಿಗೆ ಥಳಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಹಲ್ಲೆಗೊಳ್ಳಗಾದ 35 ವರ್ಷದ ವ್ಯಕ್ತಿ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಸೆಂಟ್ ಮೇರಿಸ್ ಸೈಕಿಯಾಟ್ರಿಕ್ ಡಿ- ಅಡಿಕ್ಸನ್ ಮತ್ತು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಾಲಯ ಪ್ರವೇಶಿಸಿದ್ದರಿಂದ ಮೇಲ್ವರ್ಗದವರು ಹಲ್ಲೆ ನಡೆಸಿದ್ದು, ಈ ಬಗ್ಗೆ ಗುಂಡ್ಲುಪೇಟೆ ದೇವಾಲಯದಲ್ಲಿ ದೂರು ನೀಡಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಆ ವ್ಯಕ್ತಿ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ ಎಂದು ಗುಂಡ್ಲುಪೇಟೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಮಾನಸಿಕವಾಗಿ ಅಸಮರ್ಥನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 ಆದಾಗ್ಯೂ, ವಿಡಿಯೋದಲ್ಲಿ ಹೇಳಿರುವ ಹೇಳಿಕೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.  ಕೆಲವು ದಿನಗಳ ಹಿಂದೆ ಕೆಲಸ ತೊರೆದಿದ್ದ ಸಂತ್ರಸ್ತ ನಾಗರಿಕ ಸೇವಾ ಪರೀಕ್ಷೆಗಾಗಿ ಸಿದ್ದತೆ ನಡೆಸುತ್ತಿದ್ದ ಎಂದು ಆತನ ಸಂಬಂಧಿ ಕಾಂತರಾಜ್ ತಿಳಿಸಿದ್ದಾರೆ.
ಗುಂಡ್ಲುಪೇಟೆಯ ಶ್ಯಾನಾದ್ರಾಹಳ್ಳಿ ನಿವಾಸಿಯಾಗಿರುವ ಸಂತ್ರಸ್ತ ಜೂನ್ 2 ರಂದು ಮೈಸೂರಿನಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯಲು ಹೋಗಿದ್ದಾರೆ. ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿದೆ. ಆದಾಗ್ಯೂ, ಅಂದು ಪರೀಕ್ಷಾ ಕೇಂದ್ರಕ್ಕೆ ನಿಗದಿತ ವೇಳೆಗೆ ಹೋಗದೆ ಮನೆಗೆ  ಹಿಂತಿರುಗುತ್ತಿದ್ದ ಎಂದು ಕಾಂತರಾಜ್ ಹೇಳಿದ್ದಾರೆ. 
ಮನೆಗೆ ಹಿಂದಿರುವ ವೇಳೆಯಲ್ಲಿ ಊಟಿ ರಸ್ತೆಯ ರಾಘವಪುರ ಗ್ರಾಮದ ಬಳಿ ತಂಗಿದ್ದು, ಅಲ್ಲಿಯೇ ರಾತ್ರಿಯಿಡೀ ತಂಗಿದ್ದಾನೆ. ಮಾರನೇ ದಿನ ಕೆಬೆಕಟ್ಟೆ ಶನಿ ದೇವಾಲಯಕ್ಕೆ ಹೋಗಿದ್ದಾಗ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಆತನ ಊರಿನ ಹೆಸರು ತಿಳಿಸಿದ ನಂತರ ಆತ ದಲಿತ ಎಂದು ತಿಳಿದು ಅಮಾನವೀಯವಾಗಿ ಥಳಿಸಿದ್ದಾರೆ ಎಂದು ಕಾಂತರಾಜ್ ಆರೋಪಿಸಿದ್ದಾರೆ. 
ಸಂತ್ರಸ್ತನ ತಂದೆ ನಿವೃತ್ತ ಬಿಇಒ ಅಧಿಕಾರಿ ಆತನನನ್ನು ರಕ್ಷಿಸಲು ಹೋದಾಗ  ಅವರನ್ನು ಕೂಡಾ ಕಂಬಕ್ಕೆ ಕಟ್ಟಲು ಗ್ರಾಮಸ್ಥರು ಪ್ರಯತ್ನಿಸಿದ್ದಾರೆ. ಆದರೆ, ಅವರ ಮಾನಸಿಕವಾಗಿ ಅಸ್ವಸ್ಥರಾದಗ ಅವರನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಒಂದು ದಿನ ಆತ ಮಾಡಿದ ವಿಡಿಯೋಗಳನ್ನು ಪಡೆಯಲು ಪ್ರಯತ್ನಿಸಿದ್ದಾಗಿ  ಸಂತ್ರಸ್ತನ ಸ್ನೇಹಿತ ಮೂರ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾಸಗಿ ಶಾಲೆಗಳ ಮಾನ್ಯತೆ: ನಿಯಮಗಳ ಪರಿಷ್ಕರಣೆಗೆ ಸದನ ಸಮಿತಿ ರಚನೆ- ಸಚಿವ ಮಧು ಬಂಗಾರಪ್ಪ

ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ!

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

SCROLL FOR NEXT