ರಾಜ್ಯ

ಕಬ್ಬು ಬೆಳೆಗಾರರಿಂದ ಪ್ರಧಾನಿ ಮೋದಿ ಭೇಟಿ: ಬಾಕಿ ಹಣ ಪಾವತಿಸಲು ಮನವಿ

Shilpa D
ಬೆಳಗಾವಿ: ಉತ್ತರ ಕರ್ನಾಕದ ಕಬ್ಬು ಬೆಳೆಗಾರರು  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ,  ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಂದ ಹಣ ಕೊಡಿಸಲು ಮೋದಿ ಅವರು ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಲಿದ್ದಾರೆ,
ರಾಜ್ಯದ 72 ಸಕ್ಕರೆ ಕಾರ್ಖಾನೆಗಳು ಹಲವು ವರ್ಷಗಳಿಂದ ಕಬ್ಬು ಹಣ ಬಾಕಿ ಉಳಿಸಿಕೊಂಡಿದ್ದು ತಾವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡಿರುವುದಾಗಿ ಮನವಿ ಮಾಡಲಿದ್ದಾರೆ.
ಕಬ್ಬು ಬೆಳೆಗಾರರ ಪ್ರಕಾರ  ಸಕ್ಕರೆ ಕಾರ್ಖಾನೆಗಳು 2,400 ಕೋಟಿ ರು ಹಣವನ್ನು ಬಾಕಿ ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ,.
ಸಕ್ಕರೆ ಆಯೋಗ ಮತ್ತು ನಿರ್ದೇಶಕರುಗಳಿಗೆ ನಾವು ಈಗಾಗಲೇ ಪ್ರತ್ಯೇಕವಾಗಿ 500 ದೂರು ನೀಡಿದ್ದೇವೆ, ಯಾವ್ಯಾವ ಕಾರ್ಖಾನೆಗಳು ಎಷ್ಟೆಷ್ಟು ಹಣ ಬಾಕಿ ಉಳಿಸಿಕೊಂಡಿವೆ ಎಂಬ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ, ಹೀಗಾಗಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಉಳಿದ ಹಣ ಕೊಡಿಸುವಂತೆ ಮನವಿ ಮಾಡಲಿದ್ದಾರೆ.
SCROLL FOR NEXT