ಬೆಂಗಳೂರು: ಬೆಂಗಳೂರಿನಲ್ಲಿ ಕೆರೆಗಳ ಶೋಧಕ್ಕಾಗಿ ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎನ್ಇಇಆರ್ಐ) ನೇಮಕ ಮಾಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್ ಗೆ ತಿಳಿಸಿದೆ. ಒಳಚರಂಡಿ ನೀರು ಕೆರೆಗಳನ್ನು ಪ್ರವೇಶಿಸುವುದನ್ನು ತಡೆಯಲು ಆ ಮೂಲಕ ಅಂತರ್ಜಲ ಮಟ್ಟ ಕುಸಿತವನ್ನು ತಡೆಗಟ್ಟಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಈ ಮೇಲಿನಂತೆ ತಿಳಿಸಿದೆ.
ನ್ಯಾಯಾಲಯವು ಎನ್ಇಇಆರ್ಐ ಗಳನ್ನು ನೇಮಕ ಮಾಡಿದರೆ ಯಾವ ಆಕ್ಷೇಪವಿಲ್ಲ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಇದಕ್ಕೆ ಮುನ್ನ .ಕೆರೆಗಳ ಲೆಕ್ಕಪರಿಶೋಧನೆಗಾಗಿ ಎನ್ಇಇಆರ್ಐ ಗಳನ್ನೇಕೆ ನೇಮಕ ಮಾಡಬರದು ಎಂದು ನ್ಯಾಯಾಲಯ ಕೇಳಿದೆ. ಅಲ್ಲದೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ 15 ಕೆರೆಗಳು ಕಣ್ಮರೆಯಾಗಿದೆ ಎಂದು ಬಿಬಿಎಂಪಿನೀಡಿದ ಅಂಕಿಅಂಶಗಳಉಲ್ಲೇಖಿಸಿ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ಸೋಮವಾರ ತಾನು ಆದೇಶ ಹೊರಡಿಸುತ್ತೇನೆ ಎಂದು ಹೇಲೀದ್ದ ನ್ಯಾಯಾಲಯ ಇದರೊಡನೆಯೇ "ಬೆಂಗಳೂರಿನಲ್ಲಿ ಕೆರೆಗಳನ್ನು ಪತ್ತೆ ಹಚ್ಚಲು ನಾವು ಷರ್ಲಾಕ್ ಹೋಮ್ಸ್ ನಂತಹಾ ವ್ಯಕ್ತಿಯನ್ನು ಹುಡುಕಬೇಕಾಗಿದೆ." ಎಂದು ಅಭಿಪ್ರಾಯಪಟ್ಟಿದೆ.ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿದ ನ್ಯಾಯಾಲಯ ಒಂದೊಮ್ಮೆ ಸರ್ಕಾರ ಕೆರೆಗಳ ನಿರ್ವಹಣೆ, ಪುನಃಸ್ಥಾಪನೆ ಮಾಡದೆ ಹೋದಲ್ಲಿ ಸಾರ್ವಜನಿಕ ನಂಬಿಕೆಯನ್ನುಕಳೆದುಕೊಳ್ಲಬೇಕಾಗುವುದು ಎಂದು ಎಚ್ಚರಿಸಿದೆ.
ಈ ಹಿಂದಿನ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ತಯಾರಿಸಿದ ವರದಿಯ ಪ್ರತಿವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.ಬೆಂಗಳೂರಿನಲ್ಲಿ 374 ಕೆರೆಗಳಿದೆ ಎಂದು ವರದಿಯಲ್ಲಿ ಹೇಳಿದೆ.ಆದರೆ ಕೆರೆ ಅಭಿವೃದ್ದಿ ಪ್ರಾಧಿಕಾರ ಈಗ ನ್ಯ್ನತೆ ಅನುಭವಿಸುತ್ತಿರುವ ಕಾರಣ ರಾಜ್ಯ ರಾಜಧಾನಿಯಲ್ಲಿರುವ ಕೆರೆಗಳ ತಿಗತಿಯ ಕುರಿತಾದ ವರದಿಯ ವಿವರಗಳನ್ನು ಒದಗಿಸುವಂತೆ ನ್ಯಾಯಾಲಯವು ಸರ್ಕಾರಿ ವಕೀಲರನ್ನು ಕೇಳಿದೆ.