ರಾಜ್ಯ

ಜುಲೈ ವೇಳೆಗೆ ಶೇಕಡಾ 90ರಷ್ಟು ರೈತರ ಸಾಲ ಮನ್ನಾ; ಸರ್ಕಾರ

Sumana Upadhyaya
ಬೆಂಗಳೂರು: ರಾಜ್ಯದ ಬಹುತೇಕ ರೈತರ ಸಾಲಗಳು ವಾಣಿಜ್ಯ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಜುಲೈ ವೇಳೆಗೆ ಮನ್ನಾ ಆಗುವ ಸಾಧ್ಯತೆಯಿದೆ.
ವಾಣಿಜ್ಯ ಬ್ಯಾಂಕುಗಳ ಪ್ರತಿನಿಧಿಗಳೊಂದಿಗೆ ನಿನ್ನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್, ವಾಣಿಜ್ಯ ಬ್ಯಾಂಕುಗಳಲ್ಲಿ ಮನ್ನಾಕ್ಕೆ ಅರ್ಹವಾಗಿರುವ ಶೇಕಡಾ 90ಕ್ಕಿಂತಲೂ ಅಧಿಕ ಸಾಲಮನ್ನಾಗಳು ಜೂನ್ ಕೊನೆಯ ವೇಳೆಗೆ ಮನ್ನಾ ಆದರೆ ಜುಲೈ ವೇಳೆಗೆ ಸಹಕಾರಿ ಬ್ಯಾಂಕುಗಳಲ್ಲಿನ ಸಾಲಮನ್ನಾಗಳು ಮನ್ನಾ ಆಗಲಿವೆ. ಅನುತ್ಪಾದಕ ಆಸ್ತಿಗಳ ಮೇಲಿನ ಸಾಲಗಳಲ್ಲಿ ಶೇಕಡಾ 25ರಷ್ಟು ಬ್ಯಾಂಕು ಭರಿಸುತ್ತದೆ. ಕೊನೆಗೂ ಬ್ಯಾಂಕ್ ಸಾಲ ಮನ್ನಾ ವಿಚಾರದಲ್ಲಿ ಇದ್ದ ಕೊನೆಯ ಅಡೆತಡೆಯನ್ನು ಸರ್ಕಾರ ನಿವಾರಿಸಿದೆ.
ಬ್ಯಾಂಕುಗಳು ಶೇಕಡಾ 25ರಷ್ಟು ಸಾಲವನ್ನು ಭರಿಸುವುದರಿಂದ ಸುಮಾರು 1 ಲಕ್ಷ ರೈತರ 965 ಕೋಟಿ ರೂಪಾಯಿ ಹಣವನ್ನು ಭರಿಸಲಿವೆ. ಸರ್ಕಾರದ ಕಡೆಯಿಂದ ಶೇಕಡಾ 75ರಷ್ಟು ಭರಿಸಲಾಗುತ್ತದೆ.
SCROLL FOR NEXT