ರಾಜ್ಯ

ಮಂಡ್ಯ: ಸಾಲಬಾಧೆ ತಾಳದೆ ಅಂತ್ಯಸಂಸ್ಕಾರಕ್ಕೆ ಬರುವಂತೆ ಸಿಎಂಗೆ ವೀಡಿಯೋ ಸಂದೇಶ ಕಳಿಸಿ ರೈತ ಆತ್ಮಹತ್ಯೆ!

Raghavendra Adiga
ಮಂಡ್ಯ: ತನ್ನ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಆಹ್ವಾನಿಸಿ ವೀಡಿಯೋ ಸಂದೇಶ ಕಳಿಸಿದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ, ಸಂತೇಬಾಚಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ ತಾಳಲಾಗದೆ ಸುರೇಶ್ (45)  ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಮುನ್ನ ಆವರು ಸಿಎಂ ಕುಮಾರಸ್ವಾಮಿ ಅವರಿಗೆ ತನ್ನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಎಂದು ವಿಡಿಯೋ ಸಂದೇಶ ರವಾನಿಸಿದ್ದಾರೆ.
ಮುಖ್ಯಂತ್ರಿ ಕುಮಾರಸ್ವಾಮಿ ಅಭಿಮಾನಿಯಾಗಿದ್ದ ಸುರೇಶ್ "ನಮ್ಮಂತ ಬಡ ರೈತರನ್ನು ಕಾಪಾಡಿ" ಎಂದು ಸಿಎಂಗೆ ಮನವಿ ಮಡಿದ್ದಾರೆ.
ರೈತ ಸುರೇಶ್ ಸೆಲ್ಫಿ ವೀಡಿಯೋ ಮಾಡಿದ್ದು"ಸಂತೇಬಾಚಹಳ್ಳಿಯಲ್ಲಿರುವ ಎಲ್ಲಾ ಕೆರೆಕಟ್ಟೆಗಳನ್ನು ನೀರಿನಿಂದ ತುಂಬಿಸಿ ರೈತರನ್ನು ಕಾಪಾಡಿ. ನೀವು ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದು ನನ್ನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬೇಕು.ರೈತರ ವಿಚಾರವಾಗಿ ಆಶ್ವಾಸನೆ ಮಾತ್ರ ನೀಡದೆ ನಿಜವಾಗಿ ಸಮಸ್ಯೆಗಳನ್ನು ಪರಿಹರಿಸುತ್ತೀರಿ ಎಂದು ನಂಬಿದ್ದೇನೆ"  ಎಂದಿದ್ದಾರೆ.
ಭಾನುವಾರ ಬೆಳಗ್ಗೆ ರೈತ ಸುರೇಶ್ ತಮ್ಮ ಜಮೀನಿನ ಸಮೀಪ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ. ರೈತನ ಅಂತ್ಯ ಸಂಸ್ಕಾರ ನಡೆದ ತರುವಾಯ ಈ ವೀಡಿಯೋ ಅವರ ಕುಟುಂಬದವರಿಗೆ ದೊರಕಿದ್ದು ಇದೀಗ ವೈರಲ್ ಆಗಿದೆ.
ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
SCROLL FOR NEXT