ರಾಜ್ಯ

ಮೈಸೂರು: ಯುವಕನ ಬೆತ್ತಲೆ ಮೆರವಣಿಗೆ ಖಂಡಿಸಿ ನೂರಾರು ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

Shilpa D
ಮೈಸೂರು: ಗುಂಡ್ಲುಪೇಟೆ ಬಳಿ ದಲಿತ ಯುವಕನ ಬೆತ್ತಲೆ ಮೆರವಣಿಗೆ ವಿರೋಧಿಸಿ ನೂರಾರು ಮಂದಿ ದಲಿತರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. 
ಹಿಂದೂ ಧರ್ಮದಲ್ಲಿ ಪ್ರೀತಿ, ಹೊಂದಾಣಿಕೆ ಹಾಗೂ ಸಮಾನತೆಯಿಲ್ಲ ಎಂದು ಆರೋಪಿಸಿರುವ ದಲಿತ ಸಮುದಾಯದ ಗುಂಪೊಂದುಸ ಬೌದ್ಧ ಧರ್ಮಕ್ಕೆ ಮತಾಂತರವಾಗುವುದಾಗಿ ಘೋಷಿಸಿದ್ದಾರೆ. ಬುದ್ಧನ ಅನುಯಾಯಿಗಳು ಬೌದ್ಧ ಧರ್ಮದ ಮೂಲಭೂತ ತತ್ವಗಳನ್ನು ಅನುಸರಿಸುತ್ತಿದ್ದಾರೆ ಹೀಗಾಗಿ ನಾವು ಬೌದ್ಧ ಧರ್ಮ ಸೇರುತ್ತೆವೆ ಎಂದು ಹೇಳಿದ್ದಾರೆ.
ಬುದ್ಧನ ಪಂಚಶೀಲ ತತ್ತವ ಅನುಸರಿಸಲು ತಾವು ಬದ್ದರಾಗಿದ್ದೇವೆ ಎಂದು ಒಗ್ಗಟ್ಟು ಪ್ರದರ್ಶಿಸಿದ್ದಾರೆ,. ಮೂಡನಂಭಿಕೆ ಆಚರಣೆಗಳನ್ನು ಮಾಡತ್ತಾ ಸಮಯ ವ್ಯರ್ಥಗೊಳಿಸಬಾರದು ಎಂದು ಅಂಬೇಡ್ಕರ್ ಹೇಳಿದ್ದರು. 
ಸಮಾನತೆಯಿಲ್ಲದ ಹಿಂಧೂ ಧರ್ಮದಲ್ಲಿ ನಾವು ಇರುವುದಿಲ್ಲ, ಇಲ್ಲಿ ಪರಸ್ಪರ ಗೌರವ ಮತ್ತು ನಂಬಿಕೆಯಿಲ್ಲ,ಹೀಗಾಗೀ ನಾವು ಬುದ್ಧ ಧರ್ಮ ಅನುಸರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಗುಂಡ್ಲುಪೇಟೆ ಕೆಬ್ಬೆಕಟ್ಟೆ ಶನಿಮಹಾತ್ಮ ದೇವಾಲಯದಲ್ಲಿ ಇತ್ತೀಚೆಗೆ ನಡೆದ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ವಿರೋಧಿಸಿ,ನೂರಾರು ದಲಿತರು ಹಾಗೂ ಪ್ರಗತಿ ಪರ ಸಂಘನೆಗಳು ರ್ಯಾಲಿ ನಡೆಸಿ ಘೋಷಣೆ ಕೂಗಿದರು.
SCROLL FOR NEXT