ಹಬಿಬುರ್ ರೆಹಮಾನ್ 
ರಾಜ್ಯ

ಬೆಂಗಳೂರು ನಗರದ ಆಧಾರ್ ಕಾರ್ಡ್ ಹೊಂದಿದ್ದ ಉಗ್ರ ಹಬಿಬುರ್ ರೆಹಮಾನ್!

ಗುರುವಾರ ರಾಮನಗರದಲ್ಲಿ ಪತ್ತೆಯಾಗಿದ್ದ ಎರಡು ಸಜೀವ ಬಾಂಬ್​ಗಳನ್ನು ತಾನೇ ಇಟ್ಟಿರುವುದಾಗಿ ಒಪ್ಪಿಕೊಂಡಿರುವ ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್....

ಬೆಂಗಳೂರು: ಗುರುವಾರ ರಾಮನಗರದಲ್ಲಿ ಪತ್ತೆಯಾಗಿದ್ದ ಎರಡು ಸಜೀವ ಬಾಂಬ್​ಗಳನ್ನು ತಾನೇ ಇಟ್ಟಿರುವುದಾಗಿ ಒಪ್ಪಿಕೊಂಡಿರುವ ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್ ಅಲಿಯಾಸ್ ಶೇಖ್ ನ ಬಳಿ ಬೆಂಗಳೂರು ನಗರ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಪತ್ತೆಯಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಸ್ಥಳೀಯ ದಲ್ಲಾಳಿಯ ಸಹಾಯದಿಂದ ಆತ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದ. ಕೆಲ ಕಾಲ ವೈಟ್ ಫೀಲ್ಡ್ ನಲ್ಲಿ ಫಿನಾಯಿಲ್ ಹಾಗೂ ಬಟ್ಟೆ ಮಾರಾಟ ಮಾಡುವ ವ್ಯಾಪಾರದ ಸೋಗಿನಲ್ಲಿ ಈ ಹಿಂದೆ ಬಂಧಿತನಾಗಿದ್ದ ಮುನೀರ್ ಜೊತೆ ಆತ ಕೂಡಿಕೊಂಡು ದರೋಡೆಗೆ ಸಂಚು ರೂಪಿಸುತ್ತಿದ್ದ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಈ ಇಬ್ಬರು ಆರೋಪಿಗಳ ವಿರುದ್ಧ ನಗರದ ಅಮೃತಹಳ್ಳಿ, ಅತ್ತಿಬೆಲೆ ಪೊಲೀಸ್ ಠಾಣೆ ಸೇರಿ ಐದು ಕಡೆ ಪ್ರಕರಣ ದಾಖಲಾಗಿವೆ. ಇವರು ದರೋಡೆಗೆ ಹೋಗುವ ಸಂದರ್ಭದಲ್ಲೂ ಸುಧಾರಿತ ಸ್ಫೋಟಕ ಸಾಧನ(ಐಇಡಿ) ತೆಗೆದುಕೊಂಡು ಹೋಗುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ದಳದ ವಿಚಾರಣೆಯಿಂದ ತಿಳಿದು ಬಂದಿದೆ.
2004ರ ಅಕ್ಟೋಬರ್ ನಲ್ಲಿ ನಡೆದ ಬದ್ವಾನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಗುರುವಾರ ಉಗ್ರನನ್ನು ಎನ್ ಐಎ ಅಧಿಕಾರಿಗಳು ಕೋಲ್ಕತ್ತಾಕ್ಕೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್; ನದಿ ಪಾತ್ರದಲ್ಲಿ ಕಟ್ಟೆಚ್ಚರ