ರಾಜ್ಯ

ಛತ್ತೀಸ್‌ಗಢ ನಕ್ಸಲ್ ದಾಳಿಯಲ್ಲಿ ಕಲಬುರ್ಗಿ ಯೋಧ ಹುತಾತ್ಮ

Raghavendra Adiga
ಕಲಬುರ್ಗಿ: ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಕೇಶ್ಕುತಲ್ ಬಳಿ ನಕ್ಸಲರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಮೂಲದ ಓರ್ವನೂ ಸೇರಿದಂತೆ ಮೂವರು ಸಿಆರ್‌ಪಿಎಫ್‌ನ ಯೋಧರು ಸಾವನ್ನಪ್ಪಿದ್ದಾರೆ.
ಕಲಬುರ್ಗಿ ಮೂಲದವರಾದ  ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಹಾದೇವ್ ಪಿ(50)  ಹುತಾತ್ಮರಾಗಿದ್ದು ಅವರು ನಕ್ಸಲ್ ಪ್ರಾಬಲ್ಯದಲ್ಲಿನ ಪ್ರದೇಶದಲ್ಲಿ ಕಾರ್ಯಾಚರಣೆ ತಂಡದ ಭಾಗವಾಗಿದ್ದರು.ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಎಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್ ಸಹ ಸಾವನ್ನಪ್ಪಿದ್ದಾರೆ.
ಮೂಲದ ಪ್ರಕಾರ ಮಹದೇವ್ ತಮ್ಮ ಮಗಳ ಸೀಮಂತಕ್ಕಾಗಿ ಇನ್ನೆರಡು ದಿನಗಳಲ್ಲಿ ಊರಿಗೆ ಆಗಮಿಸಬೇಕಾಗಿತ್ತು.
ಯೋಧರ ಮೃತದೇಹವನ್ನು ತವರೂರಾದ ಮರಗುತ್ತಿಗೆ ಶನಿವಾರ ಹೈದರಾಬಾದ್‌ನಿಂದ ರಸ್ತೆ ಮೂಲಕ ತರಲಾಗುವುದು ಎಂದು ಕಲಬುರ್ಗಿ  ಎಸ್‌ಪಿ ಐಡಾ ಮಾರ್ಟಿನ್ ಮಾರ್ಬನಿಯಾಂಗ್ ತಿಳಿಸಿದ್ದಾರೆ. ಮಹಾದೇವ್ 29 ವರ್ಷದಿಂದ ಸಿಆರ್‌ಪಿಎಫ್‌ನ ಜೊತೆ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ, ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
SCROLL FOR NEXT