ರಾಜ್ಯ

ಎಕ್ಸ್‌ಪ್ರೆಸ್ ಫಲಶ್ರುತಿ: ಸಂಚಾರ ನಿಯಮ ಉಲ್ಲಂಘನೆಯಾಗಿ ನಾಲ್ಕುವರೆ ತಿಂಗಳ ನಂತರ ದಂಡ ಕಟ್ಟಿದ ಸಿಎಂ ಕಾರು ಚಾಲಕ

Raghavendra Adiga
ಬೆಂಗಳೂರು: ಇದು ಪತ್ರಿಕಾ ವರದಿಯ ಫಲಶ್ರುತಿ! ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರು ಚಾಲಕ ತಾನು ನಾಲ್ಕು ತಿಂಗಳ ಹಿಂದೆ ಸಂಚಾರಿ ನಿಯಮ ಪಾಲಿಸದೆ ಇದ್ದ ಕಾರಣ ಕಟ್ಟಬೇಕಾಗಿದ್ದ ದಂಡದ ಹಣವನ್ನು ಶನಿವಾರ ಕಟ್ಟಿದ್ದು ಪ್ರಕರಣ ಮುಕ್ತಾಯ ಕಂಡಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರು ಚಾಲಕ ಸಂಚಾರಿ ನಿಯಮ ಉಲ್ಲಂಘಿಸಿಯೂ ದಂಡ ಕಟ್ಟದ  ಬಗೆಗೆ  ’ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್” ಶನಿವಾರ ಲೇಖನವೊಂದನ್ನು ಪ್ರಕಟಿಸಿತ್ತು. ಇದಾದ ನಂತರದಲ್ಲಿ ಪ್ರಕರಣವನ್ನೀಗ ಮುಕ್ತಾಯಗೊಳಿಸಿದ್ದು ಕಾರು ಚಾಲಕ ತನ್ನ ಬಾಕಿ 100 ರೂ. ದಂಡ ಪಾವತಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಿರಿಯ ಅಧಿಕಾರಿಗಳಲ್ಲಿ ಒಬ್ಬರು ಶುಕ್ರವಾರ ರಾತ್ರಿ ಚಾಲಕನನ್ನು ಸಂಪರ್ಕಿಸಿದ್ದಾರೆ ಎಂದು ಸಂಚಾರ ನಿರ್ವಹಣಾ ಕೇಂದ್ರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆ ನಂತರ ಚಾಲಕ ಫಿಕ್ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ಶನಿವಾರ ಬೆಳಿಗ್ಗೆ ಬಿಲ್ ಪಾವತಿಸಿದ. ಆದರೆ, ಅಧಿಕಾರಿಯು ಚಾಲಕನ ಹೆಸರು ಅಥವಾ ಆತ ದಂಡ ಪಾವತಿಸಿದ ಸ್ಥಳವನ್ನು ಬಹಿರಂಗಪಡಿಸಿಲ್ಲ.
ಈ ವರ್ಷದ ಫೆಬ್ರವರಿ 10 ರಂದು ಸಿಎಂ ಕುಮಾರಸ್ವಾಮಿಗೆ ಸೇರಿದ್ದ ಕಾರೊಂದು ಸಂಚಾರ ನಿಯಮಗಳನ್ನು ಉಲ್ಲಂಘಿಸಿಸ ಪ್ರಕರಣವೊಂದು ದಾಖಲಾಗಿತ್ತು. ಕಾರು ಚಾಲಕ ಕಾರ್ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿ ಸಿಕ್ಕಿಬಿದ್ದಿದ್ದನು. ಆದರೆ ಆಗ ಆತ ತನ್ನ ಅಪರಾಧಕ್ಕಾಗಿ ದಂಡ ಪಾವತಿಸದೆ ತಪ್ಪಿಸಿಕೊಂಡಿದ್ದನು. ಇದರ ಸಂಬಂಧ ಶನಿವಾರ ಪತ್ರಿಕೆ ವರದಿ ಪ್ರಕಟಿಸಿದ್ದು ಸುಮಾರು ನಾಲ್ಕೂವರೆ ತಿಂಗಳ ಬಳಿಕ ಕಾರು ಚಾಲಕ ದಂಡ ಪಾವತಿಸಿದ್ದಾನೆ.
SCROLL FOR NEXT