ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಪತ್ನಿಯ ಶಂಕಿಸಿ ಪತಿಯಿಂದ ಹಲ್ಲೆ; ಪೊಲೀಸರಿಂದ ಬಂಧನ

ಪತ್ನಿ ಹೊರಗೆ ಹೋಗುವಾಗ ತನ್ನಲ್ಲಿ ಹೇಳಲಿಲ್ಲ ಎಂದು ಪತ್ನಿಯ ಪ್ರಾಮಾಣಿಕತೆ ಶಂಕಿಸಿ ಸುತ್ತಿಗೆಯಿಂದ ...

ಬೆಂಗಳೂರು: ಪತ್ನಿ ಹೊರಗೆ ಹೋಗುವಾಗ ತನ್ನಲ್ಲಿ ಹೇಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಶಂಕಿಸಿ ಸುತ್ತಿಗೆಯಿಂದ ಹೊಡೆದು ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪತ್ನಿ ಬೇರೊಬ್ಬನನ್ನು ಭೇಟಿಯಾಗಲು ಹೋಗಿದ್ದಳು ಎಂದು ಪತಿಯ ಶಂಕೆಯಾಗಿದೆ. ತೀವ್ರ ಗಾಯಗೊಂಡಿರುವ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕಮಲಾನಗರ ನಿವಾಸಿ ಚಂದ್ರಕಲಾ (32ವ) ಪತಿ ನಟರಾಜುನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಟ್ಟ ಸ್ನೇಹಿತರ ಸಂಪರ್ಕದಲ್ಲಿರುವ ನಟರಾಜು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದು ನಿರುದ್ಯೋಗಿಯಾಗಿದ್ದಾನೆ.
ಗೃಹಿಣಿಯಾಗಿರುವ ಚಂದ್ರಕಲಾ ಮನೆಯ ಹತ್ತಿರದ ಕರಿಮಾರೆಮ್ಮ ದೇವಸ್ಥಾನದಲ್ಲಿ ಅರ್ಚಕರಾಗಿರುವ ತನ್ನ ಮಾವನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಕಳೆದ ಫೆಬ್ರವರಿ 25ರಂದು ದೇವಸ್ಥಾನದ ಆವರಣವನ್ನು ಸ್ವಚ್ಛ ಮಾಡಲೆಂದು ಮಧ್ಯಾಹ್ನದ ಹೊತ್ತಿಗೆ ಹೋಗಿ ಕೆಲ ಸಮಯ ಕಳೆದು ಮನೆಗೆ ವಾಪಸ್ಸಾಗಿದ್ದರು. ಮನೆಗೆ ಮಾವನ ಜೊತೆ ಬಂದಿದ್ದಳು. ಮನೆಗೆ ಬಂದ ಪತಿ ನಟರಾಜು ಪತ್ನಿಯಲ್ಲಿ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದನು. ಪತ್ನಿಯ ಮಾತಿನಿಂದ ನಂಬಿಕೆ ಬರದೆ ಯಾರನ್ನೊ ಭೇಟಿಯಾಗಲು ಹೋಗಿದ್ದೆ ಎಂದು ಹೇಳಿ ಸುತ್ತಿಗೆಯಿಂದ ಹಲ್ಲೆ ಮಾಡಲು ಆರಂಭಿಸಿದನು ಎಂದರು.
ಕೆಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಂದ್ರಕಲಾ ಬಿಡುಗಡೆಯಾದ ನಂತರ ತಾಯಿಯ ಮನೆಗೆ ಹೋಗುತ್ತೇನೆ ಎನ್ನುತ್ತಾಳೆ.
ಪತಿಗೆ ತನ್ನ ಮೇಲೆ ತುಂಬಾ ಸಂಶಯವಿದ್ದು ಎಲ್ಲಿಗೆ ಹೋಗಲೂ ಬಿಡುವುದಿಲ್ಲ. ತಾವು ಒಟ್ಟಿಗೆ ಹೊರಗೆ ಹೋದರೂ ಯಾರಾದರೂ ತಮ್ಮನ್ನು ನೋಡಿದರೆ ನನ್ನನ್ನು ಬೈಯಲು ಆರಂಭಿಸುತ್ತಾರೆ ಎನ್ನುತ್ತಾರೆ ಚಂದ್ರಕಲಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಮನೆ ಮುಂದೆ ನಿಲ್ಲಿಸೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕಕ್ಕೆ ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ; CM ಡಿಕೆಶಿಗೆ ಪತ್ರ

'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!