ರಾಜ್ಯ

ಗಾಳಿಯ ತೀವ್ರತೆ, ಉಷ್ಣತೆಯಿಂದ ಬಂಡೀಪುರ ಬೆಂಕಿಯನ್ನು ನಿಯಂತ್ರಿಸಲು ತಡವಾಯಿತು: ಅಂಬಡಿ ಮಾಧವ್

Sumana Upadhyaya
ಮೈಸೂರು; ಗಾಳಿಯ ತೀವ್ರತೆಯ ಹೆಚ್ಚಳ ಮತ್ತು ಉಷ್ಣಾಂಶ ಇತ್ತೀಚೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿಯನ್ನು ಕ್ಷಿಪ್ರವಾಗಿ ಆರಿಸಲು ತಡೆಯಾಯಿತು ಎಂದು ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಕ (ಸಿಸಿಎಫ್) ಅಂಬಡಿ ಮಾಧವ್ ತಿಳಿಸಿದ್ದಾರೆ.
ಬಂಡೀಪುರದ ಹುಲಿ ಯೋಜನೆಯ ವೃತ್ತ ನಿರ್ದೇಶಕರಾಗಿದ್ದ ಮಾಧವ್ ಅವರು ಸಿಸಿಎಫ್ ಗೆ ವರ್ಗಾವಣೆಯಾಗಿದ್ದಾರೆ. ವಿಶ್ವ ವನ್ಯಮೃಗ ದಿನಾಚರಣೆಯಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಮಾಧವ್, ಉಷ್ಣಾಂಶದಲ್ಲಿ ಹೆಚ್ಚಳ ಮತ್ತು ತೀವ್ರ ಗಾಳಿಯಿಂದಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಕಷ್ಟವಾಯಿತು. ಗಾಳಿಯ ತೀವ್ರತೆ 40 ಕಿಲೋ ಮೀಟರ್ ವೇಗದಲ್ಲಿತ್ತು ಎಂದು ಹೇಳಿದರು.
SCROLL FOR NEXT