ರಾಜ್ಯ

ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ದಾಳಿ: ಖಾನಾಪುರದ ಯೋಧ ಹುತಾತ್ಮ

Raghavendra Adiga

ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಬೆಳಗಾವಿ ಜಿಲ್ಲೆ ಕಾನಾಪುರದ ಯೋಧ ಹುತಾತ್ಮರಾಗಿದ್ದಾರೆ. ಖಾನಾಪುರ ತಾಲೂಕು ನಾವಗಾ  ಗ್ರಾಮದ ಬಿಎಸ್‌ಎಫ್‌ ಯೋಧ ರಾಹುಲ್‌ ವಸಂತ ಶಿಂಧೆ (25)  ನಕ್ಸಲ್ ದಾಳಿಗೆ ಬಲಿಯಾಗಿದ್ದಾರೆ.

ಬಿಎಸ್‌ಎಫ್‌ 117ನೇ ಬಟಾಲಿಯನ್‌ ಯೋಧರಾಗಿದ್ದ ರಾಹುಲ್ ರಾತ್ರಿ ಪಾಳಿ ಮುಗಿಸಿ ಶಿಬಿರದತ್ತ ಹೊರಟಿದ್ದಾಗ ನಕ್ಸಲರು ಗುಂಡಿನ ದಾಲಿ ನಡೆಸಿದ್ದಾರೆ.ಈ ವೇಳೆ ರಾಹುಲ್ ಸೇರಿದಂತೆ ಒಟ್ಟು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ರಾಹು;ಲ್ ಹುತಾತ್ಮರಾಗಿರುವ ಸಂಬಂಧ ಬಿಎಸ್‌ಎಫ್‌ ಅಧಿಕಾರಿಗಳು ಅವರ ತಂದೆ  ವಸಂತ ಶಿಂಧೆ ಅವರಿಗೆ ಭಾನುವಾರ ಮಧ್ಯಾಹ್ನ ಮಾಹಿತಿ ನೀಡಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕೋಲ್ಕತ್ತಾ, ಗೋವಾ ಮಾರ್ಗವಾಗಿ ಸೋಮವಾರ ಮಧ್ಯಾಹ್ನದ ವೇಳೆಗೆ ಸ್ವಗ್ರಾಮಕ್ಕೆ ತರಲಾಗುತ್ತದೆ.

2012ರಲ್ಲಿ ಗಡಿ ಭದ್ರತಾ ಪಡೆಯ 117ನೇ ಘಟಕದಲ್ಲಿ ಸೇರ್ಪಡೆಯಾಗಿದ್ದ ರಾಹುಲ್ ಶಿಂಧೆ ಪಂಜಾಬಿನ ವಿಶಾಲಪುರದಲ್ಲಿ ತರಬೇತಿ ಹೊಂದಿದ್ದರು. ನಂತರ ಕಾಶ್ಮೀರ, ಪಂಜಾಬ್, ಜಮ್ಮ, ಸೇರಿ ಅನೇಕ ಬಾಗಗಳಲ್ಲಿ ಸೇವೆ ಸಲ್ಲಿಸಿ ಕಳೆದ ಅಕ್ಟೋಬರ್ ನಿಂದ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಹುಲ್ ಪದವಿ ಶಿಕ್ಷಣ ಮುಗಿಸಿದ್ದು ಅವರ ತಂದೆ ವಸಂತ್ ಶಿಂಧೆ ಕೃಷಿಕರಾಗಿದ್ದಾರೆ.ತಾಯಿ ಸುಜಾತಾ ಗೃಹಿಣಿ, ಓರ್ವ ಸೋದರ, ಓರ್ವ ಸೋದರಿ ಇದ್ದಾರೆ.  ಇವರ ಸೋದರ ಸಹ ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಆಗಿದ್ದಾರೆ. ಇನ್ನು ವಸಂತ್ ಶಿಂಧೆ ಅವರ ಸೋದರ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹೀಗೆ ಅವರ ಕುಟುಂಬ ಹಲವು ಜನರು ದೇಶಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎನ್ನುವುದು ಗಮನಾರ್ಹ.

ವಿವಾಹ ನಿಶ್ಚಯವಾಗಿತ್ತು
ಮೃತ ಯೋಧ ರಾಹುಲ್ ಶಿಂಧೆ ಅವರ ವಿವಾಹ ಖಾನಾಪುರದ ಪಗಾಂವ ಗ್ರಾಮದ ಯುವತಿಯೊಡನೆ ನಿಶ್ಚಯವಾಗಿತ್ತು. ಕಳೆದ ಡಿಸೆಂಬರ್ 14ರಂದು  ಎರಡು ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತ್ತು. ಮೇ ತಿಂಗಳಲ್ಲಿ ರಜೆ ಮೇಲೆ ಊರಿಗೆ ಬಂದಾಗ ವಿವಾಹವಾಗುವುದಾಗಿ ರಾಹುಲ್ ಹೇಳಿದ್ದರು. ಆದರೆ ಇದೀಗ ನಕ್ಸಲರ ದಾಳಿಗೆ ಹುತಾತ್ಮರಾಗಿರುವ ರಾಹುಲ್ ಅಗಲಿಕೆ ಅವರ ಕುಟುಂಬ, ಗ್ರಾಮಸ್ಥರಿಗೆ ಭರಿಸಲಾರದ ನೋವು ತಂದಿದೆ.
SCROLL FOR NEXT