ಚಿಕ್ಕಮಗಳೂರು: ತುಂಗೆಯಲ್ಲಿ ಸ್ನಾನಕ್ಕಾಗಿ ಹೋದ ಒಂದೇ ಕುಟುಂಬದ ನಾಲ್ವರು ನೀರುಪಾಲು! 
ರಾಜ್ಯ

ಚಿಕ್ಕಮಗಳೂರು: ತುಂಗೆಯಲ್ಲಿ ಸ್ನಾನಕ್ಕಾಗಿ ಹೋದ ಒಂದೇ ಕುಟುಂಬದ ನಾಲ್ವರು ನೀರುಪಾಲು!

ತುಂಗಾ ನದಿಯಲ್ಲಿ ಸ್ನಾನಕ್ಕಾಗಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸುಳಿಗೆ ಸಿಕ್ಕು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲಿ ನಡೆದಿದೆ.

ಚಿಕ್ಕಮಗಳೂರು: ತುಂಗಾ ನದಿಯಲ್ಲಿ ಸ್ನಾನಕ್ಕಾಗಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸುಳಿಗೆ ಸಿಕ್ಕು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಸಮೀಪದ ತುಂಗಾ ನದಿಯಲ್ಲಿ ಸ್ನಾನಕ್ಕಾಗಿ ತೆರಳಿದ್ದ ಒಂದೇ ಕುಟುಂಬದ ರಾಮಚಂದ್ರ, ರತ್ನಾಕರ, ನಾಗೇಂದ್ರ, ಪ್ರದೀಪ್ ಎನ್ನುವವರು ಸಾವನ್ನಪ್ಪಿದ ದುರ್ದೈವಿಗಳು.
ರಾಮಚಂದ್ರ ಅವರ ಮನೆಯ ಕಾರ್ಯಕ್ರಮಕ್ಕಾಗಿ ಉಳಿದ ಮೂವರು ಸಂಬಂಧಿಕರು ಆಗಮಿಸಿದ್ದರು. ಆವೇಳೆ ಪ್ರದೀಪ್ ನದಿ ಸ್ನಾನ,.ಈಜಲು ತೆರಳಿದ್ದಾನೆ. ಆಗ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದದ್ದನ್ನು ಕಂಡ ರಾಮಚಂದ್ರ, ರತ್ನಾಕರ, ನಾಗೇಂದ್ರ ಎನ್ನುವವರು ಪ್ರದೀಪ್ ಅವರನ್ನು ಉಳಿಸಲು ಮುಂದಾದಾಗ ತಾವೂ ಸುಳಿಗೆ ಸಿಕ್ಕು ನೀರುಪಾಲಾಗಿದ್ದಾರೆ.
ರತ್ನಾಕರ್ ಕೊಪ್ಪ ತಾಲೂಕಿನ ಬಾಳೆಹಕ್ಲು ಗ್ರಾಮದವರೆನ್ನಲಾಗಿದ್ದು ಉಳಿದಿಬ್ಬರ ಮಾಹಿತಿ ತಿಳಿದಿಲ್ಲ.
ಘಟನಾ ಸ್ಥಳಕ್ಕೆ ಶೃಂಗೇರಿ ಪೋಲೀಸರು, ನುರಿತ ಈಜುಗಾರರು ಆಗಮಿಸಿ ಶವಗಳ ಶೋಧಕಾರ್ಯ ನಡೆಸಿದ್ದಾರೆ, ಇದುವರೆಗೆ ಓರ್ವನ ಶವ ಮಾತ್ರ ಪತ್ತೆಯಾಗಿದ್ದು ಉಳಿದ ಮೂವರ ಶವಕ್ಕಾಗಿ ಹುಡುಕಾಟ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT