ರಾಜ್ಯ

ಶಿವಮೊಗ್ಗ ರೆಸ್ಟೋರೆಂಟ್ ನಲ್ಲಿ 'ರೋಬೊ'ಮ್ಯಾನ್ ಸರ್ವೀಸ್!

Shilpa D
ಶಿವಮೊಗ್ಗ: ಶಿವಮೊಗ್ಗದ ವಿನೋಬಾ ನಗರದಲ್ಲಿರುವ ರೆಸ್ಟೋರೆಂಟ್ ಗೆ ಬರುವ  ಗ್ರಾಹಕರಿಗೆ ಅಚ್ಚರಿ ಕಾದಿದೆ,  ಇಲ್ಲಿನ ಉಪಹಾರ ದರ್ಶಿನಿಗೆ ಬರುವ ಗ್ರಾಹಕರಿಗೆ ಹೊಸ ಅನುಭವವಾಗಲಿದೆ. ಏಕೆಂದರೆ ಈ ಹೋಟೆಲ್ ನಲ್ಲಿ ನಿಮ್ಮ ಆರ್ಡರ್ ತೆಗೆದುಕೊಳ್ಳುವುದು ವೈಟರ್ ಅಲ್ಲ, ವೈಟರ್ ರೂಪದಲ್ಲಿರುವ ರೋಬೋಟ್ ಬರುತ್ತದೆ.
ರೋಬೋಟ್ ಸೇವೆ ಇರುವ ದೇಶದ ಮೂರನೇ ರೆಸ್ಟೋರೆಂಟ್ ಇದಾಗಿದೆ, ಹಲೋ ಹಾಯ್, ನಮಸ್ಕಾರ, ನಮ್ಮ ಉಪಹಾರ ದರ್ಶಿನಿಗೆ ಸ್ವಾಗತ, ನಿಮ್ಮ ಆರ್ಡರ್ ನನ್ನ ಕೈಯ್ಯಲ್ಲಿದೆ, ತೆಗೆದುಕೊಳ್ಳಿ, ನಂತರ ನನ್ನ ಕೈ ಬಳಿ ಇರುವ ಗುಂಡಿಯನ್ನು ಒತ್ತಿ, ಎಂದು ಹೇಳುತ್ತದೆ. 
ಈ ರೋಬೋಟ್ ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುತ್ತದೆ, ಒಬ್ಬರಿಗೆ ಸಪ್ಲೈ ಮಾಡುವಾಗ, ಮತ್ತೊಬ್ಬರು ಬಯಸಿದರೇ ಅದನ್ನು ಗಮನಿಸುತ್ತದೆ,. ಚೀನಾದಲ್ಲಿ ತಯಾರಾಗಿರುವ ಈ ರೋಬೋಟ್ ಪೂರ್ಣ ಪ್ರಮಾಣದಲ್ಲಿ ಅಟೋಮ್ಯಾಟಿಕ್ ಆಗಿದೆ ಎಂದು ರೆಸ್ಟೋರೆಂಟ್ ಮಾಲೀಕ ಸುಹಾನ್ ರಾಘವೇಂದ್ರ ಹೇಳಿದ್ದಾರೆ.
ಈ ರೋಬೋಟ್ ಅನ್ನು ವಿಜಯವಾಡದಿಂದ ತಂದಿದ್ದು, ಐದೂವರೆ ಲಕ್ಷ ರು ಹಣ ಖರ್ಚು ಮಾಡಲಾಗಿದೆ, ಇದರಿಂದ ಗ್ರಾಹಕರು ಥ್ರಿಲ್ ಆಗಿದ್ದಾರೆ, ಶಿವಮೊಗ್ಗದಲ್ಲಿ ಇದು ಹೊಸ ಪ್ರಯೋಗ  ಇದಾಗಿದೆ, ರೋಬೋಟ್ ಸರ್ವ್ ಮಾಡುವುದು ನಮಗೆ ಖುಷಿ ತಂದಿದೆ, ಅದನ್ನು ನೋಡಲು ನಾವು ಹೋಗಿದ್ದೆವು ಎಂದು ಡಾ. ಪ್ರಭುದಾಸ್ ಎಂಬುವರು ಹೇಳಿದ್ದಾರೆ. 
SCROLL FOR NEXT