ಎಚ್.ಡಿ ದೇವೇಗೌಡ 
ರಾಜ್ಯ

ದೇವೇಗೌಡರಿಗೆ 86ನೇ ಹುಟ್ಟುಹಬ್ಬ: ಮೋದಿ,ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರ ಶುಭಾಶಯ

ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್​ ವರಿಷ್ಠ ಎಚ್.ಡಿ ದೇವೇಗೌಡ ಅವರು ಇಂದು 86ನೇ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ....

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್​ ವರಿಷ್ಠ ಎಚ್.ಡಿ ದೇವೇಗೌಡ ಅವರು ಇಂದು 86ನೇ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರು ಶುಭಕೋರಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇವೇಗೌಡ ಅವರು ಕುಟುಂಬ ಸಮೇತ ತಿರುಪತಿಗೆ ತೆರಳಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು. 
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್​ ಮಾಡಿ ದೇವೇಗೌಡರಿಗೆ ಶುಭ ಕೋರಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡರಿಗೆ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ. ರೈತರು ಮತ್ತು ಗ್ರಾಮ ಭಾರತದ ಬಗೆಗಿನ ಅವರ ಕಾಳಜಿ ಹಾಗೂ ಇಳಿವಯಸ್ಸಿನಲ್ಲಿಯೂ ದಣಿವರಿಯದ ಹೋರಾಟದ ಕೆಚ್ಚು ನನಗೆ ಸದಾ ಪ್ರೇರಣೆ. ಅವರಿಗೆ ಆರೋಗ್ಯ ಮತ್ತು ಆಯುಷ್ಯವನ್ನು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಭೂಕಬಳಿಕೆ ಆರೋಪದ ನಡುವೆ ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ ಕುಮಾರಸ್ವಾಮಿ! ಹೇಳಿದ್ದೇನು?