ರಾಜ್ಯ

ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!

Srinivas Rao BV
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಪರಿಣಾಮ ನೀರಿಗೆ ತತ್ವಾರ ಉಂಟಾಗಿ ಯಾತ್ರಾರ್ಥಿಗಳು ಯಾತ್ರೆಯನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಬೇಕೆಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ  ಮನವಿ ಮಾಡಿದ್ದರು. ಈ ಬೆನ್ನಲ್ಲೇ ಉಡುಪಿ, ಮಂತ್ರಾಲಯಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆಯೆಂದು ತಿಳಿದುಬಂದಿದೆ. 
ಮಂತ್ರಾಲಯದ ತುಂಗಭದ್ರಾ ನದಿ ಈಗಾಗಲೇ ಬತ್ತಿ ಹೋಗಿದ್ದು, ಭಕ್ತಾದಿಗಳು ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದೇ ವಸತಿ ಗೃಹಗದಲ್ಲೇ ಸ್ನಾನ ಮುಗಿಸಿ ರಾಯರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಇನ್ನು ಉಡುಪಿಯ ಮಧ್ವ ಸರೋವರದಲ್ಲಿಯೂ ನೀರಿಗೆ ತತ್ವಾರ ಉಂಟಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ತಲಾ 12 ಸಾವಿರ ಲೀಟರ್ ನಂತೆ 5 ಟ್ಯಾಂಕರ್ ಗಳಿಂದ ನೀರು ತೆಗೆದುಕೊಳ್ಳಲಾಗುತ್ತಿದೆ. 
ಇನ್ನು ಭೀಮಾ ನದಿ ಬಳಿ ಇರುವ ಗಾಣಗಾಗುರದಲ್ಲಿ ನದಿ ಬತ್ತಿರುವ ಕಾರಣದಿಂದ ದತ್ತ ಕ್ಷೇತ್ರದಕ್ಕೆ ಬರುವ ಯಾತ್ರಿಕರು ಸ್ನಾನಕ್ಕೂ ಸಮಸ್ಯೆ ಎದುರಿಸುವಂತಾಗಿದೆ. 
SCROLL FOR NEXT