ರಾಜ್ಯ

ಮಾತೃ ಭಾಷೆ ಕಣ್ಣಿದ್ದಂತೆ, ಅನ್ಯ ಭಾಷೆ ಕನ್ನಡಕದಂತೆ- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Nagaraja AB

ಮಂಗಳೂರು: ಮಾತೃಭಾಷೆ ಎಂಬುದು ಕಣ್ಣಿದ್ದಂತೆ, ಬೇರೆ ಭಾಷೆಗಳು ಕನ್ನಡಕವಿದ್ದಂತೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತೃ ಭಾಷೆಗೆ ಜೈಕಾರ ಮೊಳಗಿಸಿದ್ದಾರೆ.

ನಗರದ ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ೧೭ನೆ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,  ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಾತೃ ಭಾಷೆಗೆ ಮನ್ನಣೆ ನೀಡುವಂತೆ ಕರೆ ನೀಡಿದರು. 

ಮಾತೃಭಾಷೆಯನ್ನು ನಾವು ಯಾವತ್ತೂ ಮರೆಯಲೇ ಬಾರದು. ತಾಯ್ನಾಡಿನ ಮಾತೃಭಾಷೆ ನಮ್ಮನ್ನು ರಕ್ಷಿಸುವ ಹೆಮ್ಮೆಯ ಭಾಷೆ. ಹೀಗಾಗಿ ಮಾತೃಭಾಷೆಯಲ್ಲಿ ಮಾತನಾಡಲು ಯಾವತ್ತಿಗೂ ಹೆಮ್ಮೆಪಡಬೇಕು ಎಂದರು.

ಮಕ್ಕಳು ತಮ್ಮ ಸ್ಥಳೀಯ ಮಾತೃ ಭಾಷೆಯಲ್ಲೇ ಮಾತನಾಡಲು ಕಲಿಯಬೇಕು. ಸರ್ಕಾರ ಕೂಡ ಪ್ರೌಢಶಾಲೆಯವರೆಗೂ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಬೇಕು. ಹಾಗೆಂದ ಮಾತ್ರಕ್ಕೆ ತಾವು ಬೇರೆ ಭಾಷೆಗಳ ವಿರೋಧಿಯಲ್ಲ, ಆದರೆ, ಮಾತೃ ಭಾಷೆಗೆ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.

SCROLL FOR NEXT