ಸಿದ್ದರಾಮಯ್ಯ 
ರಾಜ್ಯ

ಖಾಸಗಿ ಟಿಪ್ಪು ಜಯಂತಿ ಆಚರಣೆ ಮಾಡಲು ಬಿಡಿ: ಸರ್ಕಾರಕ್ಕೆ ಸಿದ್ದರಾಮಯ್ಯ

ನ್ಯಾಯಾಲಯವೇ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಯಿಲ್ಲ ಎಂದಿರುವಾಗ ಇವರದೇನು ಸಮಸ್ಯೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. 

ಮೈಸೂರು: ನ್ಯಾಯಾಲಯವೇ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಯಿಲ್ಲ ಎಂದಿರುವಾಗ ಇವರದೇನು ಸಮಸ್ಯೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. 

ಟಿಪ್ಪು ಜಯಂತಿ ಆಚರಣೆ ಮಾಡಿದರೆ, ಎಲ್ಲಿಯೂ ಗಲಾಟೆಗಳಾಗುವುದಿಲ್ಲ. ಗಲಾಟೆ ಮಾಡುತ್ತಾರೆ ಎಂದರೆ ಅದು ಆರ್'ಎಸ್ಎಸ್'ನವರು ಮಾತ್ರ. ಕಳೆದ ಮೂರು ವರ್ಷಗಳು ನಾವು ಆಚರಣೆ ಮಾಡಲಿಲ್ಲವೇ? ಆಗ ಕೊಡಗು ಬಿಟ್ಟರೆ ಬೇರೆಲ್ಲೂ ಗಲಾಟೆ ನಡೆದಿರಲಿಲ್ಲ. ಕೊಡಗಿನ ಗಲಾಟೆಯನ್ನೂ ತಡೆಯಬಹುದಿತ್ತು. ಆದರೆ, ಪೊಲೀಸರ ಬೇಜವಾಬ್ದಾರಿತನದಿಂದ ಗಲಾಟೆಯಾಗಿತ್ತು ಎಂದು ಹೇಳಿದ್ದಾರೆ. 

ಇದೇ ವೇಳೆ ಬಿಎಸ್'ವೈ ಆಡಿಯೋ ಟೇಪ್ ಕುರಿತಂತೆ ಕಿಡಿಕಾಡಿರುವ ಅವರು, ಆಡಿಯೋದಲ್ಲಿ ಯಡಿಯೂರಪ್ಪ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದಾರೆ. ಅಮಿತ್ ಶಾ ಅವರೇ ಆಪರೇಷನ್ ಕಮಲ ಮಾಡಿದ್ದಾರೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಅಧಿಕಾರದಲ್ಲಿ ಮುಂದುವರೆಯಲು ಯಡಿಯೂರಪ್ಪ ಹಾಗೂ ಶಾಗೆ ಯಾವುದೇ ನೈತಿಕ ಹಕ್ಕಿಲ್ಲ. ಅನರ್ಹ ಶಾಸಕರ ವಿರುದ್ಧದ ಕಾನೂನು ಹೋರಾಟವನ್ನು ಕಾಂಗ್ರೆಸ್ ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT