ರಾಜ್ಯ

ಐಟಿ ನಗರ ಬೆಂಗಳೂರಿಗೆ ಉಚಿತ ವೈಫೈ: ಡಾ. ಸಿ.ಎನ್‌ ಅಶ್ವತ್ಥನಾರಾಯಣ ಘೋಷಣೆ

Lingaraj Badiger

ಬೆಂಗಳೂರು: ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿನ ಗಮನ ಸೆಳೆದು ಸಿಲಿಕಾನ್ ಸಿಟಿ ಎಂದು ಕರಸಿಕೊಳ್ಳುವ ಬೆಂಗಳೂರಿಗೆ ಮುಂದಿನ 9 ತಿಂಗಳ ಒಳಗಾಗಿ ಉಚಿತ ವೈಫೈ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದ್ದು, ಪ್ರತಿದಿನ ಒಂದು ಗಂಟೆ ಅತ್ಯಂತ ವೇಗದ ಇಂಟರ್ ನೆಟ್ ಸೌಲಭ್ಯ ದೊರೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಪ್ರಕಟಿಸಿದ್ದಾರೆ.

ಇದಕ್ಕಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವೈಫೈ ಹಾಟ್ ಸ್ಪಾಟ್‌ ಸ್ಥಾಪಿಸಲಾಗುವುದು. ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಟೆಕ್ ಸಮಾವೇಶದ ಅಂಗವಾಗಿ ಈ ಘೋಷಣೆ ಮಾಡಿದ ಅವರು, ನಾಲ್ಕು ವರ್ಷಗಳಿಂದ ವೈಫೈ ಸೌಲಭ್ಯಕ್ಕೆ ಬೇಡಿಕೆ ಇದೆ. ಬೆಂಗಳೂರು ಡಿಜಿಟಲ್ ನಗರ ನಿರ್ಮಾಣಕ್ಕೆ ೧ ಗೀಗಾ ಬೈಟ್ ನಷ್ಟು ಅಂತಾರಾಷ್ಟ್ರೀಯ ಸಾಮರ್ಥ್ಯದ ಇಂಟರ್ ನೆಟ್ ಕಲ್ಪಿಸಲು ಆಕ್ಟ್ ಸಂಸ್ಥೆ ಮುಂದಾಗಿದೆ. ಈ ಯೋಜನೆಯನ್ನು ೯ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ನಗರದ 800 ಕಿ.ಮೀ. ವ್ಯಾಪ್ತಿಯಲ್ಲಿ ಕ್ಷಿಪ್ರ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸಲು ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಡಿಜಿಟಲ್‌ ಕರ್ನಾಟಕದ ಮೂಲಕ ಡಿಜಿಟಲ್‌ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ. ಪ್ರತಿಯೊಬ್ಬರಿಗೂ ವೈಫೈ ಸೌಲಭ್ಯ ಸಿಗುವಂತಾಗಬೇಕು.  ನಗರದಲ್ಲಿ ಇನ್ನು ಮುಂದೆ ಪ್ರತಿಯೊಬ್ಬರಿಗೂ ಕನಿಷ್ಠ ಒಂದು ತಾಸು ಉಚಿತ ಇಂಟರ್‌ನೆಟ್‌ ಸಿಗುವಂತಾಗಬೇಕು.  ಈ ನಿಟ್ಟಿನಲ್ಲಿ 4000 ವೈಫ್ಐ ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು. ಸ್ಮಾರ್ಟ್‌ ಸಿಟಿಗಾಗಿ ವೈಫೈ ಟವರ್‌, ಕ್ಯಾಮರಾ ಸೇರಿದಂತೆ ಎಲ್ಲ ಸೌಕರ್ಯಯವನ್ನು  ಒದಗಿಸಲು 100 ಕೋಟಿ ರೂ. ವೆಚ್ಚವಾಗುವುದು,” ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

SCROLL FOR NEXT