ಮಹಿಳೆಯರಿಂದ ಪಂಚಾಯಿತಿಗೆ ಮುತ್ತಿಗೆ 
ರಾಜ್ಯ

ಮಹಿಳೆಯರಿಂದ ಪಂಚಾಯಿತಿಗೆ ಮುತ್ತಿಗೆ: ಬೀಗ ಹಾಕಿ ಪ್ರತಿಭಟನೆ

ಸಾರ್ವಜನಿಕ ಬಳಕೆಯಲ್ಲಿರುವ ಬಯಲು ಶೌಚಾಲಯವನ್ನು ನೆಲಸಮ ಮಾಡಲು ಹೊರಟ ಗ್ರಾಮ ಪಂ ಚಾಯತಿ ಅಧಿಕಾರಿಗಳ ಕ್ರಮ ಖಂಡಿಸಿ ಮಹಿಳೆಯರು ಪಂಚಾಯಿತಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳನ್ನು ಹೊರಕ್ಕೆ ಎಳೆದು ಬೀಗ ಹಾಕಿದ ಘಟನೆ ತಾಲ್ಲೂಕಿನ ಹಣವಾಳದಲ್ಲಿ ನಡೆದಿದೆ. 

ಗಂಗಾವತಿ: ಸಾರ್ವಜನಿಕ ಬಳಕೆಯಲ್ಲಿರುವ ಬಯಲು ಶೌಚಾಲಯವನ್ನು ನೆಲಸಮ ಮಾಡಲು ಹೊರಟ ಗ್ರಾಮ ಪಂ ಚಾಯತಿ ಅಧಿಕಾರಿಗಳ ಕ್ರಮ ಖಂಡಿಸಿ ಮಹಿಳೆಯರು ಪಂಚಾಯಿತಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳನ್ನು ಹೊರಕ್ಕೆ ಎಳೆದು ಬೀಗ ಹಾಕಿದ ಘಟನೆ ತಾಲ್ಲೂಕಿನ ಹಣವಾಳದಲ್ಲಿ ನಡೆದಿದೆ. 

ಗ್ರಾಮದ ಅಂಬೇಡ್ಕರ್ ವೃತ್ತದ ಸಮೀಪ ಇರುವ ಬಯಲು ಮಹಿಳಾ ಶೌಚಾಲಯ ಕಟ್ಟಡ ನೆಲಸಮಕ್ಕೆ ತಾಲ್ಲೂಕು ಪಂಚಾಯತಿಯ ಇಒ ಮೋಹನ್ ನೇತೃತ್ವದಲ್ಲಿ ಸಿಬ್ಬಂದಿ ಮುಂದಾಗಿದ್ದರು. ಇದನ್ನು ವಿರೋಧಿಸಿದ ಮಹಿಳೆಯರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. 

ಗ್ರಾಮದ ಎಲ್ಲಾ ಕುಟುಂಬದ ಮಹಿಳೆಯರು ಸ್ಥಿತಿವಂತರಿಲ್ಲ. ಬಯಲು ಶೌಚಾಲಯ ನೆಲಸಮ ಮಾಡಿ ಅದೇ ಸ್ಥಳದಲ್ಲಿ ಸುಸಜ್ಜಿತ ಶೌಚಾಲಯ ನಿಮರ್ಾಣ ಮಾಡಿಕೊಡುವುದಾದರೆ ಮಾತ್ರ ಅವಕಾಶ ಕೊಡುವುದಾಗಿ ಧರಣಿ ನಿರತ ಮಹಿಳೆಯರು ಪಟ್ಟು ಹಿಡಿದರು. 

ಶೌಚಾಲಯ ನೆಲಸಮ ಮಾಡಿ ಗ್ರಾಮ ಪಂಚಾಯಿತಿಯ ಹೆಚ್ಚುವರಿ ಕಟ್ಟಡ ನಿಮರ್ಾಣಕ್ಕೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದು, ಸುಲಭ ಶೌಚಾಲಯ ಬೇಕಿದ್ದರೆ ಕಟ್ಟಿ ಆದರೆ ಬೇರೆ ಯಾವ ಕಟ್ಟಡಕ್ಕೂ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

-ಎಂಜೆ ಶ್ರೀನಿವಾಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT