ರಾಜ್ಯ

ಮೈಸೂರು: ದಸರಾ ಸ್ತಬ್ಧ ಚಿತ್ರಗಳ ಮೆರವಣಿಗೆ ಆರಂಭ,ನಾಡಿನ ಸಂಸ್ಕೃತಿಯ ಅನಾವರಣ

Nagaraja AB

ಮೈಸೂರು:  ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿರುವಂತೆ ಸ್ತಬ್ದ ಚಿತ್ರಗಳ ಮೆರವಣಿಗೆ ಆರಂಭವಾಗಿದೆ.

ಯಧುವೀರ್ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿದ ಬಳಿಕ  ನಿಶಾನೆ, ನೌಪತ್ ಅನೆಗಳು ಮೆರವಣಿಗೆ ಹೊರಟಿದ್ದು, ಜಾನಪದ ಕಲಾತಂಡಗಳೊಂದಿಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ಕಣ್ಮನ ಸೆಳೆಯಿತು. 

ಚಿಕ್ಕಮಗಳೂರು ಜಿಲ್ಲಾಡಳಿತದಿಂದ ರೂಪಿಸಲಾಗಿರುವ ಶಿಶಿಲ ಬೆಟ್ಟ, ಬಳ್ಳಾರಿ ಜಿಲ್ಲೆಯ 'ಹಂಪಿಯ ವಾಸ್ತುಶಿಲ್ಪ ಕಲಾ ವೈಭವ' ಮಂಡ್ಯ ಜಿಲ್ಲೆಯ 'ಆದಿ ಚುಂಚನಗರಿ ಮಠ 'ಬೆಂಗಳೂರು ನಗರ ಜಿಲ್ಲೆಯ ಚಂದ್ರಯಾನ-2, ದಾವಣಗೆರೆಯ ಏರ್ ಸ್ಟೈಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ, ಹಾಸನ ಜಿಲ್ಲೆಯ ಎತ್ತಿನ ಹೊಳೆ,  ಗದಗ ಜಿಲ್ಲೆಯ ಹೆಣ್ಣು ಮಗು ರಕ್ಷಿಸಿ,  ಮೈಸೂರು ಜಿಲ್ಲೆಯ ಜಿಎಸ್ ಎಸ್ ಮಠದಿಂದ ಸಮಾಜಕ್ಕೆ ಕೊಡುಗೆ, ಚಿಕ್ಕಮಗಳೂರು ಜಿಲ್ಲೆಯ ರೇಷ್ಮೆ ಮತ್ತು ಎಚ್ ನರಸಿಂಹಯ್ಯ ಸ್ತಬ್ಧಚಿತ್ರ,  ಚಾಮರಾಜನಗರ ಜಿಲ್ಲೆಯ 'ಸಮೃದ್ದಿ ಸಂಪತಿನ ನಡುವೆ ಹುಲಿಯ ಸಂತೃಪ್ತ ತಾಣ' ದಕ್ಷಿಣ ಕನ್ನಡ ಜಿಲ್ಲೆಯ 'ಮಂಗಳಾದೇವಿ'  ಬಾಗಲಕೋಟೆಯ ಅತಿವೃಷ್ಠಿ . ಹಾಸನ ಜಿಲ್ಲೆಯ ಎತ್ತಿನಹೊಳೆ ಯೋಜನೆ ಕುರಿತಾದ ಸ್ತಬ್ಧಚಿತ್ರ,  ಹಾವೇರಿ ಜಿಲ್ಲೆಯ ಶಂಖನಾದ ಮೊಳಗಿಸುತ್ತಿರುವ ಕನಕದಾಸರು , ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ವೈಭವ ಸಾರುವ ಸ್ತಬ್ಧ ಚಿತ್ರ ಸೇರಿದಂತೆ ಪ್ರತಿಯೊಂದು ಜಿಲ್ಲೆಯ 38  ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ನಾಡಿನ, ಕಲೆ, ಸಂಸ್ಕೃತಿಯನ್ನು ಅನಾವರಣ ಮಾಡಿದವು.

ವಿವಿಧ ಜಿಲ್ಲೆ, ಇಲಾಖೆಗಳಿಂದ ನಿರ್ಮಿಸಿರುವ ಸಾಮಾಜಿಕ ಕಳಕಳಿ ಹಾಗೂ ದೇಶದ ಸಾಧನೆ, ಮಹಿಳೆ- ಮಕ್ಕಳ ಜಾಗೃತಿ ಕಲಾಕೃತಿಗಳು ಗಮನ ಸೆಳೆಯಿತು.

ಜಗ್ಗಲಗೆ ಮೇಳ, ಗೊರವರ ಕುಣಿತ, ಪೂಜಾ ಕುಣಿತ, ಚಂಡೆ ಮೇಳ, ತಮಟೆ ವಾದನ ಮತ್ತಿತರ ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

SCROLL FOR NEXT