ಸಂಗ್ರಹ ಚಿತ್ರ 
ರಾಜ್ಯ

ಹಾಸನ: ಪ್ರೀತಿಸಲು ಒಲ್ಲೆ ಎಂದ ಪ್ರೇಯಸಿಗೆ ಭಗ್ನ ಪ್ರೇಮಿಯಿಂದ ಚೂರಿ ಇರಿತ!

ಪ್ರೀತಿಸಲು ನಿರಾಕರಿಸಿದ ಪ್ರೇಯಸಿಗೆ ಭಗ್ನಪ್ರೇಮಿಯೊಬ್ಬ ರಸ್ತೆ ಮಧ್ಯೆಯೇ ಚಾಕು ಇರಿದು ಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ. 

ಹಾಸನ: ಪ್ರೀತಿಸಲು ನಿರಾಕರಿಸಿದ ಪ್ರೇಯಸಿಗೆ ಭಗ್ನಪ್ರೇಮಿಯೊಬ್ಬ ರಸ್ತೆ ಮಧ್ಯೆಯೇ ಚಾಕು ಇರಿದು ಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ.

ಶುಕ್ರವಾರ ಮಧ್ಯಾಹ್ನ ನಡೆದಿರುವ ಘಟನೆಯಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿ ಮೇಘನಾ(18) ಚಾಕು ಇರಿತಕ್ಕೆ ಒಳಗಾಗಿದ್ದಾಳೆ.ಇನ್ನು ಪಡುವಲಹಿಪ್ಪೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷ ಬಿಎ ಓದುತ್ತಿದ್ದ ಅರಕಲಗೂಡಿನ ನೆಲಬಳ್ಳಿ ಗ್ರಾಮದ ಮಣಿಕಂಠ(19) ಚಾಕು ಇರಿದ ಭಗ್ನಪ್ರೇಮಿ.

ಕಳೆದ ಕೆಲ ದಿನಗಳಿಂದಲೂ ಮೇಘನಾಳನ್ನು ಈತ ಹಿಂಬಾಲಿಸುತ್ತಿದ್ದನಲ್ಲದೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಶುಕ್ರವಾರ ಕಾಲೇಜಿನಿಂದ ಮನೆಗೆ ಹೊರಟಿದ್ದ ಮೇಘನಾಳನ್ನು ಹೊಳೆನರಸೀಪುರ ಬೈಪಾಸ್ ಬಳಿ ಅಡ್ಡಗಟ್ಟಿ ಚಾಕು ಇರಿದು ಹಲ್ಲೆ ನಡೆಸಿದ್ದಾನೆ.

ಮೇಘನಾ ಕುತ್ತಿಗೆ, ಕೈಗಳಿಗೆ ಹಲ್ಲೆಯಿಂದಾಗಿ ಗಾಯಗಳಾಗಿದೆ. ಸಧ್ಯ ಆಕೆಯನ್ನು ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ಸಮಯದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿ ಮಣಿಕಂಠನನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ