ರಾಜ್ಯ

ವೇತನ ಪರಿಷ್ಕರಣೆ ಮಾತುಕತೆ ವಿಫಲ: ಇಂದು ಹೆಚ್ ಎಎಲ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ 

Sumana Upadhyaya

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್) ನೌಕರರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.


ನೌಕರರ ಮನವೊಲಿಸಿ ಕೆಲಸಕ್ಕೆ ಹಾಜರಾಗುವಂತೆ ಎಷ್ಟೇ ಮನವೊಲಿಸಿದರೂ ಕೂಡ ಪ್ರಯೋಜನವಾಗದ ಹಿನ್ನಲೆಯಲ್ಲಿ ಮಾತುಕತೆ ವಿಫಲವಾಗಿರುವುದರಿಂದ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ ಎಂದು ಹೆಚ್ ಎಎಲ್ ನಿನ್ನೆ ತಿಳಿಸಿತ್ತು. ನಿನ್ನೆ ಹೆಚ್ ಎಎಲ್ ನೌಕರರ ಒಕ್ಕೂಟ ಮತ್ತು ವ್ಯವಸ್ಥಾಪಕರ ನಡುವೆ ಮಾತುಕತೆ ನಡೆದಿತ್ತು. ಅದರಲ್ಲಿ ತಮ್ಮ ನ್ಯಾಯಯುತ ಹಾಗೂ ಸಕಾರಣ ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಒತ್ತಾಯಿಸಿದ್ದರು.


2017, ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಅಕ್ಟೋಬರ್ 14ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವಂತೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹೆಚ್ ಎಎಲ್ ನೌಕರರ ಒಕ್ಕೂಟ ದೇಶದ ಎಲ್ಲಾ ಕಡೆಗಳಲ್ಲಿರುವ ತನ್ನ ರಕ್ಷಣಾ ಸಾರ್ವಜನಿಕ ಸೇವಾ ಘಟಕಗಳಿಗೆ ನೊಟೀಸ್ ಜಾರಿಗೊಳಿಸಿತ್ತು.

SCROLL FOR NEXT