ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲಿ 101 ಐಎಎಸ್, ಐಪಿಎಸ್ ಅಧಿಕಾರಿಗಳ ಹುದ್ದೆಗಳು ಖಾಲಿ

ರಾಜ್ಯ ಸರ್ಕಾರದಲ್ಲಿ 101 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹುದ್ದೆ ಖಾಲಿಯಿದೆ. ರಾಜ್ಯ ಸರ್ಕಾರದಡಿ ಒಟ್ಟು 529 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹುದ್ದೆಯಿದ್ದು ಸದ್ಯ 428 ಮಂದಿ ಅಧಿಕಾರಿಗಳಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ 101 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹುದ್ದೆ ಖಾಲಿಯಿದೆ. ರಾಜ್ಯ ಸರ್ಕಾರದಡಿ ಒಟ್ಟು 529 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹುದ್ದೆಯಿದ್ದು ಸದ್ಯ 428 ಮಂದಿ ಅಧಿಕಾರಿಗಳಿದ್ದಾರೆ.


ಅಧಿಕಾರಿಗಳ ಕೊರತೆಯಿಂದಾಗಿ ಈಗಿರುವವರು ಒಂದಕ್ಕಿಂತ ಹೆಚ್ಚು ಇಲಾಖೆಗಳನ್ನು ನಿಭಾಯಿಸಬೇಕಾಗಿದೆ. ಮುಂದಿನ ವರ್ಷದ ಅಂತ್ಯದ ಹೊತ್ತಿಗೆ ಸುಮಾರು 25 ಅಧಿಕಾರಿಗಳು ರಾಜೀನಾಮೆ ನೀಡಲಿರುವುದರಿಂದ ಈಗಿರುವ ಅಧಿಕಾರಿಗಳ ಮೇಲೆ ಕೆಲಸದ ಹೊರೆ ಜಾಸ್ತಿಯಾಗಲಿದೆ.


ಡಿಪಿಎಆರ್ ಪ್ರಕಾರ, 314 ಅನುಮೋದಿತ ಐಎಎಸ್ ಹುದ್ದೆಗಳಿದ್ದು ಅವುಗಳ ಪೈಕಿ ಈಗ 256 ಹುದ್ದೆಗಳಲ್ಲಿ ಅಧಿಕಾರಿಗಳಿದ್ದಾರೆ. ಐಪಿಎಸ್ ಅಧಿಕಾರಿಗಳ ಹುದ್ದೆಗಳಲ್ಲಿ 172 ಅಧಿಕಾರಿಗಳಿದ್ದು ಅನುಮೋದಿತ ಹುದ್ದೆಗಳ ಸಂಖ್ಯೆ 215 ಆಗಿದೆ. ಈ ವರ್ಷ 13 ಐಎಎಸ್ ಅಧಿಕಾರಿಗಳು ನಿವೃತ್ತಿ ಹೊಂದುತ್ತಿದ್ದು ಐಪಿಎಸ್ ವಿಭಾಗಗಳಲ್ಲಿ ನಾಲ್ವರು ಈ ವರ್ಷ ನಿವೃತ್ತಿಯಾಗುತ್ತಿದ್ದಾರೆ.


ಮುಂದಿನ ವರ್ಷ ನಿವೃತ್ತಿಯಾಗುವ ಅಧಿಕಾರಿಗಳ ಪಟ್ಟಿಯನ್ನು ನಾವು ಸಿದ್ದ ಮಾಡುತ್ತಿದ್ದೇವೆ. ಅದರ ಪ್ರಕಾರ 16 ಐಎಎಸ್ ಮತ್ತು 12 ಐಪಿಎಸ್ ಅಧಿಕಾರಿಗಳು 2020ರ ಕೊನೆಗೆ ನಿವೃತ್ತಿಯಾಗುತ್ತಿದ್ದಾರೆ. 2017ರಲ್ಲಿ 75 ಐಎಎಸ್ ಅಧಿಕಾರಿಗಳ ಕೊರತೆಯಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಸದ್ಯ 58 ಐಎಎಸ್ ಅಧಿಕಾರಿಗಳ ಕೊರತೆಯಿದೆ. 1990ರ ದಶಕದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಕೊರತೆ ಆರಂಭವಾಯಿತು. ವಾರ್ಷಿಕವಾಗಿ ಅಧಿಕಾರಿಗಳನ್ನು ಸೇರಿಸಿಕೊಳ್ಳುವ ಪ್ರವೃತ್ತಿ 150ರಿಂದ 80ಕ್ಕೆ ಇಳಿಯಿತು.

ಇವುಗಳಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ ನಾಲ್ಕು ಅಥವಾ ಅದಕ್ಕಿಂತಲೂ ಕಡಿಮೆ ಅಧಿಕಾರಿಗಳು ಸಿಗುತ್ತಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೇ ವಾರ್ಷಿಕವಾಗಿ ಅಂತರ ಭಾರತೀಯ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಸಂಖ್ಯೆ 180ಕ್ಕೆ ಏರಿಕೆಯಾಯಿತು. ರಾಜ್ಯ ಸರ್ಕಾರ ಪ್ರತಿವರ್ಷ 9 ಅಥವಾ 10 ಅಧಿಕಾರಿಗಳನ್ನು ಪಡೆದುಕೊಳ್ಳುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Watch| Traffic Fine ಗೆ ಶೇ.50 ರಷ್ಟು ರಿಯಾಯಿತಿ; ವಂಚಕರಿಂದ ಮೋಸಹೋದ ಟೆಕ್ಕಿ!; Dharmasthala Case: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ SIT ದಾಳಿ; ಮೊಬೈಲ್ ವಶಕ್ಕೆ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT