ಸಾಂದರ್ಭಿಕ ಚಿತ್ರ 
ರಾಜ್ಯ

ಸೂರಾಗಲಿದೆ ಹಳೆ ಬಸ್ಸುಗಳು: ನಿರ್ಮಾಣ ಕಾರ್ಮಿಕರ ಮಕ್ಕಳತ್ತ ದಯೆ ತೋರಿದ ಸರ್ಕಾರ 

ನಗರಗಳಲ್ಲಿ ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವಲ್ಲಿ ಕಾರ್ಮಿಕರ ಮಕ್ಕಳು  ಇಡೀ ದಿನ ತಮ್ಮ ಪೋಷಕರು ಕೆಲಸ ಮಾಡುವ ಜಾಗದಲ್ಲಿಯೇ ಬಿಸಿಲು, ಮಳೆ, ಚಳಿಯಲ್ಲಿ ಕಾಲ ಕಳೆಯುವುದನ್ನು ನಾವು ನೋಡುತ್ತೇವೆ.

ಬೆಂಗಳೂರು:ನಗರಗಳಲ್ಲಿ ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವಲ್ಲಿ ಕಾರ್ಮಿಕರ ಮಕ್ಕಳು  ಇಡೀ ದಿನ ತಮ್ಮ ಪೋಷಕರು ಕೆಲಸ ಮಾಡುವ ಜಾಗದಲ್ಲಿಯೇ ಬಿಸಿಲು, ಮಳೆ, ಚಳಿಯಲ್ಲಿ ಕಾಲ ಕಳೆಯುವುದನ್ನು ನಾವು ನೋಡುತ್ತೇವೆ. ಇಂತಹ ಮಕ್ಕಳಿಗೆ ರಕ್ಷಣೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಹಳೆ ಬಸ್ಸುಗಳ ಭಾಗಗಳಿಂದ ಸಂಚಾರಿ ಶಿಶುಧಾಮಗಳನ್ನು(ಪುಟ್ಟ ಗುಡಿಸಲಿನ ಆಕಾರದಲ್ಲಿ ನಿರ್ಮಾಣ) ಒದಗಿಸಿಕೊಡಲು ನಿರ್ಧರಿಸಿದೆ.


ಬೆಂಗಳೂರಿನಲ್ಲಿ ಇಂತಹ ಸಂಚಾರಿ ಶಿಶುಧಾಮಗಳನ್ನು ಆರಂಭಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ. ದೇಶದ ಹಲವು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕರು ಕೆಲಸ ಹುಡುಕಿಕೊಂಡು ನಗರಗಳಿಗೆ ಅದರಲ್ಲೂ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಅಪಾರ್ಟ್ ಮೆಂಟ್ ಕಟ್ಟಡಗಳಿಂದ ಹಿಡಿದು ವಾಣಿಜ್ಯ ಮಳಿಗೆಗಳು, ರಸ್ತೆ ನಿರ್ಮಾಣ ಇತ್ಯಾದಿಗಳಲ್ಲಿ ಲಕ್ಷಾಂತರ ಕಾರ್ಮಿಕರು ತೊಡಗಿರುತ್ತಾರೆ. ಇಲ್ಲಿ ದೊಡ್ಡವರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರೆ ಸಣ್ಣ ಮಕ್ಕಳು ತಮ್ಮ ಪಾಡಿಗೆ ಹೊರಗೆ ಆಡುತ್ತಿರುತ್ತಾರೆ. ಆದರೆ ಹೀಗೆ ಆಡುವ ಮಕ್ಕಳು ಮೈ ಕೈಗಳಲ್ಲೆಲ್ಲಾ ಮಣ್ಣು ಧೂಳು ಮೆತ್ತಿಕೊಂಡಿರುತ್ತಾರೆ, ಶುಚಿತ್ವ ಎಂಬುದು ಇಂತಹ ಮಕ್ಕಳಲ್ಲಿ ಕಂಡುಬರುವುದಿಲ್ಲ, ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 


ಇದನ್ನು ಮನಗಂಡಿರುವ ಸರ್ಕಾರ, ಹಳೆಯ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ಸುಗಳ ಭಾಗಗಳನ್ನು ಜೋಡಿಸಿ ಸಣ್ಣ ಮನೆಗಳ ರೀತಿ ಕಲಾವಿದರ ಕೈಯಲ್ಲಿ ಮಾಡಿಸಿ ಅದನ್ನು ನಿರ್ಮಾಣ ಕಟ್ಟಡಗಳ ಸಮೀಪ ಇಡಲಾಗುತ್ತದೆ. ಮಕ್ಕಳಿಗೆ ಆಕರ್ಷಕವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಇದನ್ನು ಸರ್ಕಾರೇತರ ಸಂಘಟನೆಗಳಿಗೆ ನೀಡಿ ಅವುಗಳು ನಡೆಸಿಕೊಂಡು ಹೋಗುವಂತೆ ಮಾಡುತ್ತೇವೆ. ಕಾರ್ಮಿಕರು ತಮ್ಮ ಮಕ್ಕಳನ್ನು ಇದರೊಳಗೆ ಬಿಟ್ಟು ಕೆಲಸ ಮಾಡುತ್ತಿರಬಹುದು. ಬೆಳಗಿನ ಹೊತ್ತು ಈ ಮಕ್ಕಳಿಗೆ ಆರೋಗ್ಯಕರ ಉಪಾಹಾರಗಳನ್ನು ನೀಡುವ ಬಗ್ಗೆ ಕೂಡ ಯೋಚಿಸುತ್ತೇವೆ ಎನ್ನುತ್ತಾರೆ ಕಾರ್ಮಿಕ ಇಲಾಖೆ ಮೂಲಗಳು.


ನಿರ್ಮಾಣ ಕಾಮಗಾರಿ ತಿಂಗಳುಗಟ್ಟಲೆ ನಡೆಯುವುದರಿಂದ ಈ ಸಂಚಾರಿ ಶಿಶುಧಾಮಗಳನ್ನು ಅಲ್ಲಿನ ಕೆಲಸ ಮುಗಿಯುವವರೆಗೆ ನಿಲ್ಲಿಸಲಾಗುತ್ತದೆ. ಇದಕ್ಕಾಗಿ ರಾಜ್ಯಸಭಾ ಸದಸ್ಯ ಜಿ ಚಂದ್ರಶೇಖರ ತಮ್ಮ ಸಂಸದರ ನಿಧಿಯಿಂದ 25 ಲಕ್ಷ ನೀಡಿದ್ದಾರೆ. ಇದರಲ್ಲಿ ಹಳೆ ಬಸ್ಸುಗಳನ್ನು ಖರೀದಿಸಿ ಅದಕ್ಕೆ ಹೊಸ ವಿನ್ಯಾಸ ನೀಡಿ ಎನ್ ಜಿಒಗಳಿಗೆ ನೀಡಲಾಗುತ್ತದೆ ಎಂದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್, ರಾಜ್ಯಾದ್ಯಂತ 100 ಬಸ್ಸುಗಳ ಸಂಗ್ರಹಕ್ಕೆ ಒಪ್ಪಿಗೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT