ರಾಜ್ಯ

ಲೋಕಸಭೆ ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮದಲ್ಲಿ 50 ಸಾವಿರ ಸುಳ್ಳು ಸುದ್ದಿ 3 ಮಿಲಿಯನ್ ಬಾರಿ ಪ್ರಕಟ!

Shilpa D

ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ವೇಳೆ ಬರೋಬ್ಬರೀ 50 ಸಾವಿರ ಸುಳ್ಳು ಸುದ್ದಿಗಳು 2 ಮಿಲಿಯನ್ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಮೈಸೂರು ಹಾಗೂ ಯುಕೆ ಮೂಲದ ಸಂಸ್ಥೆ ಇದನ್ನು ಪತ್ತೆ ಹಚ್ಚಿದೆ. ಪಾಕಿಸ್ತಾನ ಮತ್ತು ಚೀನಾ ಐಪಿ ಅಡ್ರೆಸ್ ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂದು ತಿಳಿದು ಬಂದಿದೆ, ದ್ವೇಷಪೂರಿತ ಲೇಖನಗಳು 
ಮೂರು ಲಕ್ಷಕ್ಕ ಅಧಿಕ ಬಾರಿ ಹಾಗೂ ಪಕ್ಷಪಾತಿ ಲೇಖನಗಳು 15 ಲಕ್ಷ ಬಾರಿ ಶೇರ್ ಆಗಿವೆ.

ಇದರಿಂದ ಭಾರತದಲ್ಲಿ ಮತ್ತಷ್ಟು ತಪ್ಪು ಮಾಹಿತಿ ಹಂಚಿದಂತಾಗಿದೆ.ಭಾರತದ ಚುನಾವಣೆ ಬಗ್ಗೆ ವಾಟ್ಸಾಪ್ ಮತ್ತು ಫೇಸ್ ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಭಾರತೀಯ ಚುನಾವಣೆ ಬಗ್ಗೆ ತಪ್ಪು ಮಾಹಿತಿ ಎಂಬ ಅಧ್ಯಯನ ಬಹಿರಂಗ ಪಡಿಸಿದೆ.

9,44,482 ಲೇಖನಗಳನ್ನು ವಿಶ್ಲೇಷಣೆ ಮಾಡಲಾಗಿದ್ದು, ಅದರಲ್ಲಿ ಶೇ. 14.1 ವಿಶ್ವಾಸಾರ್ಹವಲ್ಲದ್ದು ಮತ್ತು ಶೇ.15 ರಷ್ಟು ಸುಳ್ಳು ಸುದ್ದಿಗಳಾಗಿವೆ, ಚುನಾವಣೆ ಸಮಯದಲ್ಲಿ 1,33,167 ಸುದ್ದಿಗಳು ಪ್ರಕಟವಾಗಿದ್ದು ಅದರಲ್ಲಿ 33 ಸಾವಿರ ವರದಿಗಳು ನಕಲಿಯಾಗದಿವೆ.

SCROLL FOR NEXT