ರಾಜ್ಯ

ತುಂಗಭದ್ರ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ: ಹಂಪಿ ಸ್ಮಾರಕಗಳು ಜಲಾವೃತ

Srinivas Rao BV

ಹೊಸಪೇಟೆ: ತುಂಗಭದ್ರ ಜಲಾಶಯದ ತೀರ ಪ್ರದೇಶದಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜಲಾಶಯಕ್ಕೆ ಹೆಚ್ಚುತ್ತಿರುವ ಬಾರಿ ಒಳ ಹರಿವು, ಹೊರ ಹರಿವನ್ನ ಹೆಚ್ಚಳ ಮಾಡುವ ಸಾಧ್ಯತೆ ಹಿನ್ನೆಲೆ ನದಿ ಪಾತ್ರದ ಜನ ಸಾಮಾನ್ಯರಿಗೆ ಟಿ.ಬಿ.ಬೋರ್ಡ್ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಹಂಪಿಯ ತುಂಗಭದ್ರ ನದಿ ದಡದಲ್ಲಿರುವ ಕೋಟಿ ಲಿಂಗ, ಲಕ್ಷ್ಮಿ ದೇವಸ್ಥಾನ, ಚಕ್ರತೀರ್ಥ, ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಒನಕೆ ಕಿಂಡಿ ಮಾರ್ಗ, ಇತಿಹಾಸ ಪ್ರಸಿದ್ದ ಪುರಂದರ ಮಂಟಪ ಸಂಪೂರ್ಣ ಜಲಾವೃತ.

ಈ ವರ್ಷದ ಈ ಎರಡು ತಿಂಗಳಲ್ಲಿ ನಾಲ್ಕನೆ ಬಾರಿಗೆ‌ ನದಿಗೆ ನೀರು ಹರಿ ಬಿಡುತ್ತಿರುವುದು ಇತಿಹಾಸ, ಜಲಾಶಯದಿಂದ ಇನ್ನೂ ಹೊರ ಹರಿವನ್ನ ಹೆಚ್ಚಳಮಾಡುವ ಸಾದ್ಯತೆ ಇದೆ.

ಹೂವಿನಹಡಗಲಿಯಲ್ಲಿ ಪ್ರವಾಹ ಪರಿಸ್ಥಿತಿ:

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಾದ್ಯಂತ ಒಂದು ರೀತಿಯ ಜಲ ಪ್ರಳಯ ಪರಿಸ್ಥಿತಿ ಎದುರಾಗಿದೆ.

ನಿನ್ನೆ ರಾತ್ರಿ ಪೂರ್ತಿ ಸುರಿದ ಬಾರಿ ಮಳೆಗೆ ತಾಲೂಕಿನ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಎರಡು ದಶಕಗಳಿಂದ ಹನಿ ನೀರು ಕಾಣದ ಕೆರೆಗಳ ಕೋಡಿಗಳು ತುಂಬಿ ತುಳುಕುತ್ತಿವೆ, ನೀರಿನ ರಭಸಕ್ಕೆ ತಾಲೂಕಿನ ಬೂದನೂರು ಕೆರೆ ಕೋಡಿಗೆ ಹಾನಿಯಾಗಿದೆ.

ಹಿರೇಕೊಳಚಿ, ಚಿಕ್ಕಕೊಳಚಿ, ಹಿರೇಹಡಗಲಿ, ಮಾಗಳ, ಬೂದನೂರು, ತುಂಬಿನಕೇರಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಿರೇಕೊಳಚಿ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು‌ ನುಗ್ಗಿ ಹಾನಿಯಾಗಿದೆ.

ಹತ್ತಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆಲವು ಮನೆಗಳಿಗೆ ಹಾನಿಯಾಗಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

SCROLL FOR NEXT