ಸಾಂದರ್ಭಿಕ ಚಿತ್ರ 
ರಾಜ್ಯ

ವರದಾ ನದಿಯಲ್ಲಿ ಕಾಲು ಜಾರಿದ ಯುವಕ,  ರಕ್ಷಿಸಲು ಹೋದ ವೃದ್ಧ ಇಬ್ಬರು ನೀರುಪಾಲು

ವರದಾ ನದಿಯಲ್ಲಿ ಎತ್ತಿನ ಮೈತೊಳೆಯುತ್ತಿದ್ದ ವೇಳೆ ಆಯತಪ್ಪಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನೀರುಪಾಲಾದ ಘಟನೆ ಹಾವೇರಿ ತಾಲೂಕು ಹಂದಿಗನೂರ ಗ್ರಾಮದಲ್ಲಿ ನಡೆದಿದೆ.

ಹಾವೇರಿ: ವರದಾ ನದಿಯಲ್ಲಿ ಎತ್ತಿನ ಮೈತೊಳೆಯುತ್ತಿದ್ದ ವೇಳೆ ಆಯತಪ್ಪಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನೀರುಪಾಲಾದ ಘಟನೆ ಹಾವೇರಿ ತಾಲೂಕು ಹಂದಿಗನೂರ ಗ್ರಾಮದಲ್ಲಿ ನಡೆದಿದೆ.

ಪ್ರಶಾಂತ ಸೋಮಪ್ಪ ಕೊಂಚಿಗೇರಿ (18) ಮತ್ತು  ಪರಮೇಶಪ್ಪ ಕಮ್ಮಾರ (62) ನೀರುಪಾಲಾದ ದುರ್ದೈವಿಗಳು.

ಎತ್ತಿನ ಮೈ ತೊಳೆಯಲು ಮಾವನ ಜೊತೆ ಹೋಗಿದ್ದ ಪ್ರಶಾಂತ್ ಕಾಲುಜಾರಿ ವರದಾ ನದಿಯಲ್ಲಿ ಮುಳುಗಿದ್ದಾರೆ. 

ಇದನ್ನು ಕಂಡು ಅಲ್ಲೆ  ಸ್ನಾನ ಮಾಡುತ್ತಿದ್ದ  ವೃದ್ಧರೋರ್ವರು ಪ್ರಶಾಂತ್ ರಕ್ಷಣೆಗೆ ಮುಂದಾಗಿದ್ದರು. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ಇಬ್ಬರೂ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು , ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

International Yoga Day 2026: ವಯಸ್ಸನ್ನು ಮೀರಿಸುವ ಆರೋಗ್ಯದ ಮಂತ್ರ ಯೋಗ, 50ಕ್ಕಿಂತ 70ರ ವಯಸ್ಸಿನಲ್ಲಿ ಹೆಚ್ಚು ಆರೋಗ್ಯವಂತರಾಗೋಣ: ಪ್ರಧಾನಿ ಮೋದಿ

Hormuz ಜಲಸಂಧಿಯಲ್ಲಿ ಅಮೆರಿಕಾ ಹೊಸ ಷರತ್ತು: ಭದ್ರತೆ ಬೇಕಾದರೆ ಸುಂಕ ಕಟ್ಟಿ, ಇಲ್ಲದಿದ್ದರೆ ನಿಮ್ಮ ಹಡಗುಗಳ ನೀವೇ ರಕ್ಷಿಸಿಕೊಳ್ಳಿ; ಹೊಸ ತೆರಿಗೆ ಬಾಂಬ್ ಸಿಡಿಸಿದ ಟ್ರಂಪ್

ಹೈಟೆಕ್ ಭ್ರಷ್ಟಾಚಾರ; PhonePe ಮೂಲಕ ಲಂಚ ಪಡೆದ EPFO ಸಿಬ್ಬಂದಿಗೆ 3 ವರ್ಷ ಕಠಿಣ ಜೈಲು, ದುಬಾರಿ ದಂಡ: CBI ವಿಶೇಷ ಕೋರ್ಟ್ ಮಹತ್ವದ ತೀರ್ಪು

ಎಲ್ಲೆಂದ್ರಲ್ಲಿ ಗಾಡಿ ನಿಲ್ಸೋ ಸವಾರರೇ ಎಚ್ಚರ: ಟೋಯಿಂಗ್ ಕಾರ್ಯಾಚರಣೆ ಮತ್ತೆ ಆರಂಭ!

Met Gala: ಅಮೆರಿಕ ಪ್ರವಾಸದ ವೇಳೆ ಚಿತ್ರ ನಿರ್ಮಾಪಕಿ Rhea Kapoor ರ ₹1.35 ಕೋಟಿ ಮೌಲ್ಯದ ವಜ್ರದ ಕಿವಿಯೋಲೆ ನಾಪತ್ತೆ