Met Gala: ಅಮೆರಿಕ ಪ್ರವಾಸದ ವೇಳೆ ಚಿತ್ರ ನಿರ್ಮಾಪಕಿ Rhea Kapoor ರ ₹1.35 ಕೋಟಿ ಮೌಲ್ಯದ ವಜ್ರದ ಕಿವಿಯೋಲೆ ನಾಪತ್ತೆ

ನಿರ್ಮಾಪಕಿ ಹಾಗೂ ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ಅವರ ಬಳಿ ಇದ್ದ 1.35 ಕೋಟಿ ಮೌಲ್ಯದ ವಜ್ರಖಚಿತ ಕಿವಿಯೋಲೆಗಳು ನಾಪತ್ತೆಯಾಗಿವೆ.
diamond earrings go missing during filmmaker Rhea Kapoors US trip
ಚಿತ್ರ ನಿರ್ಮಾಪಕಿ ರಿಯಾ ಕಪೂರ್ ವಜ್ರದ ಕಿವಿಯೋಲೆ ನಾಪತ್ತೆ (AI ರಚಿತ ಚಿತ್ರ)
Updated on: 

ಮುಂಬೈ: ಅಮೆರಿಕ ಪ್ರವಾಸದ ವೇಳೆ ಖ್ಯಾತ ಚಿತ್ರ ನಿರ್ಮಾಪಕಿ ಹಾಗೂ ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ಅವರ ₹1.35 ಕೋಟಿ ಮೌಲ್ಯದ ವಜ್ರಖಚಿತ ಕಿವಿಯೋಲೆಗಳು ನಾಪತ್ತೆಯಾಗಿದೆ.

ಸಹಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಿರ್ಮಾಪಕಿ ಹಾಗೂ ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ಅವರ ಬಳಿ ಇದ್ದ 1.35 ಕೋಟಿ ಮೌಲ್ಯದ ವಜ್ರಖಚಿತ ಕಿವಿಯೋಲೆಗಳು ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಕಳೆದ ಏಳು ವರ್ಷಗಳಿಂದ ರಿಯಾ ಕಪೂರ್ ಅವರೊಂದಿಗೆ ಕೆಲಸ ಮಾಡುತ್ತಿರುವ ಖ್ಯಾತ ಮೇಕಪ್ ಕಲಾವಿದೆ ಸವ್ಲೀನ್ ಸಿಂಗ್ (41) ಅವರು, ಮುಂಬೈ ಮೂಲದ ಆಭರಣ ವ್ಯಾಪಾರಿಗಳಿಂದ ಫ್ಯಾಷನ್ ಕಾರ್ಯಕ್ರಮಕ್ಕಾಗಿ ಬಾಡಿಗೆಗೆ ಪಡೆದಿದ್ದ ಎರಡು ಜೋಡಿ ದುಬಾರಿ ಕಿವಿಯೋಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.

ರಿಯಾ ಕಪೂರ್ ಮತ್ತು ಅವರ ತಂಡವು ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿತ್ತು. ಮೆಹ್ತಾ ಜ್ಯುವೆಲ್ಲರ್ಸ್ ಹಾಗೂ ಗೋಯೆಂಕಾ ಜ್ಯುವೆಲ್ಲರ್ಸ್‌ನಿಂದ ಬಾಡಿಗೆಗೆ ಪಡೆದಿದ್ದ ಈ ಆಭರಣಗಳನ್ನು ಎರಡು ಪ್ರತ್ಯೇಕ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ, ಸವ್ಲೀನ್ ಸಿಂಗ್ ಅವರ ಕೈಚೀಲದಲ್ಲಿ ಇಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

diamond earrings go missing during filmmaker Rhea Kapoors US trip
PhonePe ಮೂಲಕ ಲಂಚ ಪಡೆದ EPFO ಸಿಬ್ಬಂದಿಗೆ 3 ವರ್ಷ ಕಠಿಣ ಜೈಲು, ದುಬಾರಿ ದಂಡ: CBI ವಿಶೇಷ ಕೋರ್ಟ್ ಮಹತ್ವದ ತೀರ್ಪು

ತಂಡವು ಏಪ್ರಿಲ್ 27ರಂದು ಮುಂಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ದುಬೈ ಮೂಲಕ ಪ್ರಯಾಣಿಸಿ, ಏಪ್ರಿಲ್ 28ರಂದು ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತು. ನ್ಯೂಯಾರ್ಕ್‌ನ ದಿ ಪಿಯರ್ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ತೆರಳಿದ ಬಳಿಕ, ಸವ್ಲೀನ್ ಸಿಂಗ್ ಅವರು ಆಭರಣಗಳ ಪೆಟ್ಟಿಗೆಗಳನ್ನು ತೆರೆದಾಗ ಅವು ಖಾಲಿಯಾಗಿರುವುದು ಪತ್ತೆಯಾಗಿದೆ ಎಂದು ದೂರಿನ ಆಧಾರದ ಮೇಲೆ ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಆಭರಣಗಳಲ್ಲಿ ₹66 ಲಕ್ಷ ಮೌಲ್ಯದ 18 ಕ್ಯಾರೆಟ್ ಪಚ್ಚೆ ಕಲ್ಲು ಅಳವಡಿಸಲಾದ ವಜ್ರಖಚಿತ ಚಿನ್ನದ ಕಿವಿಯೋಲೆಗಳ ಜೋಡಿ ಹಾಗೂ ₹69 ಲಕ್ಷ ಮೌಲ್ಯದ ಜಾಂಬಿಯನ್ ಪಚ್ಚೆ ಕಲ್ಲು ಅಳವಡಿಸಲಾದ ಚಿನ್ನದ ಅಂಚಿನ ಕಿವಿಯೋಲೆಗಳ ಜೋಡಿ ಸೇರಿವೆ ಎನ್ನಲಾಗಿದೆ.

ಮುಂಬೈಗೆ ಹಿಂದಿರುಗಿದ ನಂತರ ಸವ್ಲೀನ್ ಸಿಂಗ್ ಅವರು ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 303(2)ರ ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಿಸಲಾಗಿದೆ.

ಕಳ್ಳತನವು ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆಯೇ, ಅಥವಾ ವಿಮಾನ ಪ್ರಯಾಣದ ವೇಳೆ ನಡೆದಿದೆಯೇ, ದುಬೈ ಟ್ರಾನ್ಸಿಟ್‌ನಲ್ಲಿ ಸಂಭವಿಸಿದೆಯೇ ಅಥವಾ ತಂಡ ನ್ಯೂಯಾರ್ಕ್ ತಲುಪಿದ ನಂತರ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಂಪೂರ್ಣ ಪ್ರಯಾಣ ಮಾರ್ಗವನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com