ರಾಜ್ಯ

ಹಂಪಿ ಸ್ಮಾರಕಗಳ ಧ್ವಂಸ: ಕಿಡಿಗೇಡಿಗಳ ಪತ್ತೆ ಹಚ್ಚಲು ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ 

Shilpa D

ಬಳ್ಳಾರಿ:  ಕೆಲವು ದುಷ್ಕರ್ಮಿಗಳು ಇತ್ತೀಚೆಗೆ ಹಂಪಿಯಲ್ಲಿನ ಸ್ಮಾರಕಗಳನ್ನು ಧ್ವಂಸಗೊಳಿಸಿದ್ದರ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಭಾರತೀಯ ಪ್ರಾಚ್ಯ ಸಂಶೋಧನಾ ಇಲಾಖೆ ಭದ್ರತೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ವಿಶ್ವ ಪರಂಪರೆಯ ಕೆಲವು ಪ್ರಸಿದ್ಧ ತಾಣಗಳಲ್ಲಿ ಈಗಾಗಲೇ  ಹೈ ಎಂಡ್ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಿರೂಪಾಕ್ಷ ದೇವಾಲಯ, ಲೋಟಸ್ ಮಹಲ್, ಕ್ವೀನ್ಸ್ ಬಾತ್ ಮುಂದಾದ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 

ಈ ಎಲ್ಲಾ ಕ್ಯಾಮೆರಾಗಳು ಹೆಚ್ಚಿನ ರೆಸ್ಯೂಲೆಶನ್ ಹೊಂದಿದ್ದು, 10 ಸ್ಮಾರಕಗಳನ್ನು ಕವರ್ ಮಾಡುತ್ತದೆ.  ಉಳಿದವುಗಳಿಗೆ ಕೂಡಲೇ ಸಿಸಿಟಿವಿ ಕ್ಯಾಮೆರಾ  ಅಳವಡಿಸಲಾಗುವುದು, ಈ ಸಂಬಂಧ ಕಳೆದ ತಿಂಗಳಿಂದ ಕೆಲಸ ಆರಂಭವಾಗಿದೆ, 57 ಸ್ಮಾರಕಗಳಿಗೆ  ಕೂಡಲೇ ಕ್ಯಾಮೆರಾ ಅಳವಡಿಸಲಾಗುವುದು, ಇದು ಒಂದು ವರ್ಷದ ಪ್ರಾಜೆಕ್ಟ್ ಆಗಿದೆ.

ಬಳ್ಳಾರಿ ಕೋಟೆ, ಹೂವಿನಹಡಗಲಿ, ಮೈಲಾರ ಸೇರಿದಂತೆ 86 ಸ್ಮಾರಕಗಳು ಸಿಸಿಟಿವಿ ವ್ಯಾಪ್ತಿಗೆ ಒಳಪಡಲಿವೆ, ಕ್ಯಾಮೆರಾ ಅಳವಡಿಕೆಗಾಗಿ ದೆಹಲಿಯ ಪುರಾತತ್ವ ಇಲಾಖೆ ನಿರ್ದೇಶನದಂತೆ ಖಾಸಗಿ ಕಂಪನಿಯೊಂದಕ್ಕೆ ಸಿಸಿಟಿವಿ ಅಳವಡಿಕೆ ಕೆಲಸ ವಹಿಸಲಾಗಿದೆ, ಪೈಪ್ ಲೈನ್ ರಿನೋವೇಶನ್ ಕೆಲಸ ಕೂಡ ಆರಂಭವಾಗಿದ್ದು, ಟಿಕೆಟ್ ಕೌಂಟರ್ ಬಳಿ ಕ್ಯಾಮೆರಾ ಅಳವಡಿಸಲಾಗುವುದು.

SCROLL FOR NEXT