ರಾಜ್ಯ

ಗಾಂಧಿನಗರ, ಮಲ್ಲೇಶ್ವರ, ಆರ್ .ಆರ್. ನಗರ ಅಕ್ರಮ: ಗುತ್ತಿಗೆದಾರರಿಂದ 75 ಕೋಟಿಗೂ ಹೆಚ್ಚು ವಸೂಲಿಗೆ ಆದೇಶ

Nagaraja AB

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 2008ರಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ಆಧಾರದ ಮೇಲೆ ಲೆಕ್ಕ ಪರಿಶೋಧನೆ ನಡೆಸಿ ನಷ್ಟದ ಅಂದಾಜು ನಿಗದಿ ಮಾಡಲಾಗಿದೆ.

 ಇದೇ ಮೊದಲ ಬಾರಿಗೆ ಅಕ್ರಮ ಎಸಗಿದ ಗುತ್ತಿಗೆದಾರರಿಂದ ನಷ್ಟದ ಹಣ ವಸೂಲಿ ಮಾಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು, ಈ ಮೂಲಕ ನಗರಾಭಿವೃದ್ಧಿ ಇಲಾಖೆ ಹೊಸ ಪರಂಪರೆಗೆ ನಾಂದಿ ಹಾಡಿದೆ.

ಗಾಂಧಿನಗರ ವಿಭಾಗದಲ್ಲಿ 47,63,11,658 ರೂ, ಮಲ್ಲೇಶ್ವರ ವಿಭಾಗದಲ್ಲಿ 24,01,89,001 ರೂ ಹಾಗೂ ರಾಜರಾಜೇಶ್ವರಿ ವಲಯದಲ್ಲಿ 4,91,02,108 ರೂ ವಸೂಲಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

SCROLL FOR NEXT