ರಾಜ್ಯ

ಮಹಿಳಾ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ! ಪ್ರತ್ಯೇಕ ಮಹಿಳಾ ಬೋಗಿಗೆ ಸಂಸದೆ ಸುಮಲತಾ ಚಾಲನೆ

Raghavendra Adiga

ಮಂಡ್ಯ: ರೈಲಿನಲ್ಲಿ ಪ್ರಯಾಣಿಸು  ಮಹಿಳಾ ಪ್ರಯಾಣಿಕರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು ಮಹಿಳೆಯರಿಗಾಗಿ ಪ್ರತ್ಯೇಕ ವಿಶೇಷ ಬೋಗಿಗೆ  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಚಾಲನೆ ನೀಡಿದರು..

ಮಂಡ್ಯ ರೈಲ್ವೆ ನಿಲ್ದಾಣದಲ್ಲಿಂದು  ಸಂಸದೆ. ಸುಮಲತಾ ಅಂಬರೀಶ್ ಅವರು ಟೇಪ್ ಕತ್ತರಿಸಿ ವಿಶೇಷ ಬೋಗಿಗೆ ಚಾಲನೆ ನೀಡಿದರು .

ಬೆಂಗಳೂರು ಮೈಸೂರು ನಡುವೆ ಸಂಚರಿಸುವ ಮೆಮೋ ರೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿವ್ಯವಸ್ಥೆ ಕಲ್ಪಿಸಲಾಗಿದೆ.

ಸುಮಾರು 80 ಆಸನಗಳುಳ್ಳ ವಿಶೇಷ ಬೋಗಿ ಇದಾಗಿದ್ದು,ಮಹಿಳೆಯರು ಮಾತ್ರ ಈ ವಿಶೇಷ ಬೋಗಿಯಲ್ಲಿ.ಪ್ರಯಾಣಿಸಬಹುದಾಗಿದೆ. 

ಸಂಸದೆಗಾಗಿ 10 ಮೀಟರ್ ಮುಂದೆ ಬಂದ ಮೆಮೋ ರೈಲು: 

ಸಂಸದೆ ಸುಮಲತಾಅಂಬರೀಶ್ ಅವರಿಗಾಗಿ ಮೆಮೋ ರೈಲು 10 ಮೀಟರ್ ಮುಂದೆ ಬಂದ ಘಟನೆ ಜರುಗಿತು,

ಮೆಮೋ ರೈಲಿನ‌ಲ್ಲಿ ಅಳವಡಿಸಿದ್ದ ವಿಶೇಷ ಮಹಿಳಾ ಬೋಗಿಗೆ ಚಾಲನೆ ಕೊಡಲು ಬಂದಿದ್ದ ವೇಳೆ ಈ ಘಟನೆ ನಡೆಯಿತು.

10 ಮೀ ಹಿಂದೆ ನಿಂತ ರೈಲುನ್ನು ರೈಲ್ವೆ ಅಧಿಕಾರಿಗಳು ಮುಂದಕ್ಕೆ ಕರೆಸಿದರು.10 ಹೆಜ್ಜೆ ಮುಂದೆ ಬರಲು‌ ಹಿಂದೆ ಮುಂದೆ ನೋಡಿದ ಸಂಸದೆ ಸುಮಲತಾ ಅವರ ನಡೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಯಿತು.

ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಒಂದೆರಡು ಹೆಜ್ಜೆ ಮುಂದೆ ಹಾಕದೆ ಸಂಸದೆ ಸುಮಲತಾ ಅವರು,ತಾನಿರುವ ಸ್ಥಳಕ್ಕೆ ಕರೆಸಿಕೊಂಡು ರೈಲಿನಲ್ಲಿ ವಿಶೇಷ ಬೋಗಿಗೆ ಟೇಪ್ ಕತ್ತರಿಸಿ ಚಾಲನೆ ನೀಡಿದರು.

ಮಹಿಳಾ ಮೀಸಲು ಬೋಗಿಗಳಿಗೆ ಚಾಲನೆ ಖುಷಿ ತಂದಿದೆ: 

:ಮಹಿಳಾ ಮೀಸಲು ಬೋಗಿಗಳಿಗೆ ಚಾಲನೆ ಖುಷಿ ತಂದಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೆಮೋ ರೈಲಿಗೆ ಅಳವಡಿಸಿದ್ದ ಮಹಿಳಾ ಮೀಸಲು ಬೋಗಿಗಳಿಗೆ ಚಾಲನೆ ನೀಡಿದ್ದೇನೆ.ತುಂಬಾ ಖುಚಿ ಆಗುತ್ತದೆ, ಇದು ಹೆಮ್ಮೆಯ ವಿಷಯ ಎಂದರು.

ಚುನಾವಣೆ ವೇಳೆ ಮಹಿಳೆಯರು ವಿಶೇಷ ಮಹಿಳಾ ಮೀಸಲು ಬೋಗಿಯ ಮನವಿ ಮಾಡಿದ್ರು. ನಾನು ಈ ವಿಚಾರದವಾಗಿ ರೈಲ್ವೆ ಸಚಿವರಾದ ಪಿಯುಷ್ ಗೋಯಲ್, ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದೆ.

ನನ್ನ ಮನವಿಯಂತೆ ಮೆಮೋ ರೈಲಿಗೆ ಎರಡು ಬೋಗಿಗಳನ್ನ ಅಳವಡಿಸಲು ಅವಕಾಶ ನೀಡಿದ್ದಾರೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದರೆ ಹೆಚ್ಚಿನ ಬೋಗಿ ಅಳವಡಿಸಲಾಗುವುದು.ಕೇಂದ್ರ ಸರ್ಕಾರ ತನ್ನ ಮನವಿಗೆ ಸ್ಪಂದಿಸಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ ಎಂದರು.

ವಿದೇಶಿ ಹಾಲು ಆಮದು ಬೇಡ.

ನಮ್ಮ ರೈತರಿಗೆ, ನಮ್ಮ ಜನಕ್ಕೆ ನಷ್ಟ ಆಗುವ ಕೆಲಸವನ್ನ ಮೋದಿ ಅವ್ರು ಮಾಡಲ್ಲ ಎಂಬ ನಂಬಿಕೆ ನನಗಿದೆ. ಒಂದು ವೇಳೆ ಈ ಒಪ್ಪಂದದಿಂದ ರೈತರಿಗೆ ನಷ್ಟ ಆಗುವುದಾದರೆ ನಾನು ರೈತರ ಪರ ನಿಲ್ಲುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಪಠ್ಯದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರದಲ್ಲಿ,ಮಾತನಾಡಿದ ಸಂಸದೆ ಇತಿಹಾಸ ಎಷ್ಟು ಸರಿ, ಎಷ್ಟು ಸರಿಯಿಲ್ಲ ಅನ್ನೋದು ಯಾರಿಗೂ 100% ಗೊತ್ತಿರಲ್ಲ. ಈ ರೀತಿಯ ನಿರ್ಧಾರ ಮಾಡುವಾಗ ಎಲ್ಲರ‌ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕು.ಏಕಪಕ್ಷೀಯವಾಗಿ ನಿರ್ಧಾರ ಮಾಡೋದು ತಪ್ಪಾಗುತ್ತದೆ ಎನ್ನುವ ಮೂಲಕ ಬಿಜೆಪಿ ಸರ್ಕಾರದ ನಿಲುವನ್ನು ಅವರು ಖಂಡಿಸಿದರು.

ವರದಿ-ನಾಗಯ್ಯ

SCROLL FOR NEXT