ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಮದ್ವೆ ಆಗೋದಾಗಿ ನಂಬಿಸಿ ಅತ್ಯಾಚಾರ, ಕೋಚಿಂಗ್ ಸೆಂಟರ್ ಪ್ರಾಂಶುಪಾಲನ ವಿರುದ್ಧ ದೂರು ದಾಖಲು

ಕೋಚಿಂಗ್ ಸೆಂಟರ್‌ ಪ್ರಾಚಾರ್ಯನೊಬ್ಬ ಯುವತಿಗೆ ವಿವಾಹವಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ಕೋಚಿಂಗ್ ಸೆಂಟರ್‌ ಪ್ರಾಚಾರ್ಯನೊಬ್ಬ ಯುವತಿಗೆ ವಿವಾಹವಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಮೂರ್ತಿನಗರದ ಅಂಬರ್ ಲೇಔಟ್‍ನಲ್ಲಿರುವ ಕೋಚಿಂಗ್ ಸೆಂಟರ್‌ಗೆ ವೈದ್ಯಕೀಯ ಕೋರ್ಸ್‍ಗಾಗಿ ಸಂತ್ರಸ್ತೆ ಸೇರಿಕೊಂಡಿದ್ದು ಕಾಲೇಜಿನ ಜನರಲ್ ಮ್ಯಾನೇಜರ್ ಹಾಗೂ ಪ್ರಾಂಶುಪಾಲ ನಿರಂಜನ್ ಗೌಡ ಆಕೆಯನ್ನು ಮರಳುಮಾಡಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಸಂತ್ರಸ್ತೆ ಭೌತಶಾಸ್ತ್ರ ವಿಷಯದಲ್ಲಿ ಪರಿಣಿತಿ ಹೊಂದಿದ್ದರಿಂದ ಅವಳ ಜೊತೆ ಮೊದಲು ಸ್ನೇಹ ಬೆಳೆಸಿ, ನಂತರ ಪ್ರೀತಿವಾಗುವುದಾಗಿ ನಂಬಿಸಿದ್ದ ಆರೋಪಿ, ಆಕೆಗೆ ಮನೆಪಾಠ ಹೇಳಿಕೊಡುವ ನೆಪದಲ್ಲಿ ಯುವತಿಯನ್ನು ಭೇಟಿಯಾಗಿ ಸಲುಗೆ ಬೆಳೆಸಿಕೊಂಡಿದ್ದ. ಪೀಣ್ಯ ಸಮೀಪ ತನ್ನ ಪೋಷಕರೊಡನೆ ವಾಸವಿದ್ದ ಸಂತ್ರಸ್ಥೆ  ಆತನ ಮಾತನ್ನು ನಂಬಿದ್ದಾಳೆ.ಪೋಷಕರಿಲ್ಲದ ವೇಳೆ ಮನೆಪಾಠ ಹೇಳಿಕೊಡುವ ನೆಪದಲ್ಲಿ ಆಗಮಿಸುತ್ತಿದ್ದ ಆರೋಪಿ ಆಕೆಯೊಡನೆ ಸ್ನೇಹ ಬೆಳೆಸಿ "ಮದುವೆಯಾಗುವುದಾಗಿ" ನಂಬಿಸಿ ಅತ್ಯಾಚಾರವೆಸಗಿದ್ದಾನೆ.

ಇದೀಗ ನೊಂದ ಸಂತ್ರಸ್ಥೆ ನಿರಂಜನ್ ಗೌಡ ವಿರುದ್ಧ ರಾಮಮೂರ್ತಿನಗರದ ಪೋಲೀಸರಲ್ಲಿ ದೂರು ಕೊಟ್ಟಿದ್ದಾಳೆ.ಲೀಸರು ನಿರಂಜನ್ ಗೌಡ ವಿರುದ್ಧ 376, 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Afghanistan-Pakistan War: ತಕ್ಷಣದ ಕದನ ವಿರಾಮಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ: ಕತಾರ್ ವಿದೇಶಾಂಗ ಸಚಿವಾಲಯ

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಇನ್ಮುಂದೆ ಗ್ರಾ.ಪಂ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಸ್ವತ್ತು ಸೌಲಭ್ಯ..!

ಗುತ್ತಿಗೆದಾರರು ಬಾಕಿ ಬಿಲ್ ಕೇಳಿದರೆ ಅದು "ಧಮ್ಕಿ" ಹೇಗೆ ಆಗುತ್ತದೆ DCM ಡಿಕೆ.ಶಿವಕುಮಾರ್ ಅವರೇ?

ಬಿಲ್​ ಕ್ಲಿಯರ್'ಗೆ ಗುತ್ತಿಗೆದಾರರ ಆಗ್ರಹ: DCM ಡಿಕೆ.ಶಿವಕುಮಾರ್ ಮಧ್ಯಪ್ರವೇಶ, ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವ ಭರವಸೆ

ನಾನು ಮೂಲಭೂತವಾದದ ವಿರೋಧಿಯೇ ಹೊರತು ಯಾವುದೇ ಧರ್ಮಶ್ರದ್ದೆಯ ವಿರೋಧಿಯಲ್ಲ: ಪ್ರಿಯಾಂಕ್ ಖರ್ಗೆ

SCROLL FOR NEXT