ಸೊರಬ: ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು! 
ರಾಜ್ಯ

ಸೊರಬ: ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಈಜುಬಾರದೆ ಸಾವನ್ನಪ್ಪಿರುವ ದುರ್ಘಟನೆ ಸೊರಬದ ಉದ್ರಿಯಲ್ಲಿ ಸಂಭವಿಸಿದೆ.

ಶಿವಮೊಗ್ಗ: ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಈಜುಬಾರದೆ ಸಾವನ್ನಪ್ಪಿರುವ ದುರ್ಘಟನೆ ಸೊರಬದ ಉದ್ರಿಯಲ್ಲಿ ಸಂಭವಿಸಿದೆ.

ವಿನಾಯಕ (16) ಹಾಗೂ ಕಾರ್ತಿಕ್ (16)  ಮೃತಪಟ್ಟ ದುರ್ದೈವಿಗಳು. ಮೃತರು ಉದ್ರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಭಾನುವಾರ ಮಧ್ಯಾಹ್ನ 2 ಗಂಟೆಗೆ ಕೆರೆಗೆ ಈಜಲು ಹೋಗಿದ್ದರು. ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ಆಳವಾದ ನೀರಿನ ಸೆಳೆತಕ್ಕೆ ಸಿಲುಕಿ ಇವರು ಸಾವನ್ನಪ್ಪಿದ್ದಾರೆ.

ನೀರಿನಲ್ಲಿ ತೇಲುತ್ತಿದ್ದ ಶವವನ್ನು ಗ್ರಾಮಸ್ಥರು ದಡಕ್ಕೆ ತಂದರು. ಘಟನಾ ಸ್ಥಳಕ್ಕೆ ಸೊರಬ ಠಾಣೆ ವೃತ್ತ ನಿರೀಕ್ಷಕ ಉಮಾಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'5 ದಿನ ಇರಾನ್ Power Plant ಗಳ ಮೇಲೆ ದಾಳಿ ಮಾಡಲ್ಲ..': Trump ತಾತ್ಕಾಲಿಕ ಕದನ ವಿರಾಮ ಘೋಷಣೆ! ಮಾತುಕತೆ ನಿರಾಕರಿಸಿದ ಇರಾನ್

ಪಶ್ಚಿಮ ಏಷ್ಯಾ ಸಂಘರ್ಷ: 'ನಾವು ಎಲ್ಲದಕ್ಕೂ ಸಿದ್ಧ.. ಭಾರತಕ್ಕೆ 'ಅಭೂತಪೂರ್ವ' ಸವಾಲುಗಳ ಸೃಷ್ಟಿ': ಪ್ರಧಾನಿ ಮೋದಿ ಘೋಷಣೆ

ಉಪ ಚುನಾವಣೆ: ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ- ಸಿಎಂ ಸಿದ್ದರಾಮಯ್ಯ

IPL 2026: 'ನಾವು ಮನುಷ್ಯರು.. ವಸ್ತುಗಳಲ್ಲ.. ಹರಾಜು ಪ್ರಕ್ರಿಯೆ ನಿಲ್ಲಿಸಿ': Robin Uthappa ಶಾಕಿಂಗ್ ಹೇಳಿಕೆ

ವಿದ್ರಾವಕ: ಕೋತಿ ಕುತ್ತಿಗೆ ಸೀಳಿದ ಬಾಣ, ಮಹಾರಾಷ್ಟ್ರದಲ್ಲಿ 4 ದಿನದಲ್ಲಿ 2ನೇ ದಾಳಿ!

SCROLL FOR NEXT