ರಾಜ್ಯ

ಡಿಆರ್ ಡಿಒ ಮಾನವರಹಿತ ವೈಮಾನಿಕ ವಾಹನ ಚಿತ್ರದುರ್ಗದಲ್ಲಿ ಪತನ

Srinivas Rao BV

ಚಿತ್ರದುರ್ಗ: (ಡಿಆರ್‌ಡಿಒ) ದೇಶೀಯವಾಗಿ ನಿರ್ಮಿಸಿದ ಮಾನವರಹಿತ ವೈಮಾನಿಕ ವಾಹನ 'ರುಸ್ತುಂ–2' ಚಿತ್ರದುರ್ಗದ ಜೋಡಿ ಚಿಕ್ಕನಹಳ್ಳಿಯಲ್ಲಿ ಪತನವಾಗಿದೆ. 

ಚಳ್ಳಕೆರೆಯಲ್ಲಿ  ಮಾನವ ರಹಿತ ಯುದ್ಧ ವಿಮಾನ ಪರೀಕ್ಷಾ ಕೇಂದ್ರದಿಂದ ರುಸ್ತುಂ-2 ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಮಾನವ ರಹಿತ ವೈಮಾನಿಕ ವಾಹನ ಪತನಗೊಳ್ಳುತ್ತಿದ್ದಂತೆಯೇ ಜೋಡಿ ಚಿಕ್ಕನಹಳ್ಳಿಯ ಗ್ರಾಮಸ್ಥರು ಆತಂಕಗೊಂಡಿದ್ದರು. ವೈಮಾನಿಕ ವಾಹನದಲ್ಲಿದ್ದವರ ರಕ್ಷಣೆಗೆ ಧಾವಿಸಿದ ಗ್ರಾಮಸ್ಥರಿಗೆ ಅಲ್ಲಿ ಯಾವುದೆ ವ್ಯಕ್ತಿ ಇಲ್ಲದ್ದನ್ನು ಕಂಡು ಅಚ್ಚರಿ ಎದುರಾಗಿತ್ತು. 

ಘಟನಾ ಸ್ಥಳಕ್ಕೆ ಡಿಆರ್ ಡಿಒ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಗ್ರಾಮಸ್ಥರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. 

2014 ರ ಡಿಫೆಕ್ಸ್ಪೋ ನಲ್ಲಿ ರುಸ್ತುಂ-2 ನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು. 2018 ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಚಳ್ಳಕೆರೆಯಲ್ಲಿ ನಡೆಸಿದ ‘ರುಸ್ತುಂ–2’ ಡ್ರೋನ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿತ್ತು.

ಗಡಿಯಾಚೆ ಬೇಹುಗಾರಿಕೆ ನಡೆಸುವ ಜತೆಗೆ ಶತ್ರು ಪಡೆಗಳನ್ನು ಹೊಡೆದುರುಳಿಸುವ ವಿಶೇಷ ವಿಮಾನ ಇದಾಗಿದೆ. ಸುಮಾರು 200 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ದಿನದ 24 ಗಂಟೆಯೂ ಹದ್ದಿನ  ಕಣ್ಣಿಟ್ಟು, ಸೇನೆಯ ಮೂರೂ ಪಡೆಗಳಿಗೆ ಚಿತ್ರ ಸಹಿತ ಮಾಹಿತಿ ರವಾನಿಸುವ ಕೆಲಸವನ್ನು ಇದು ಮಾಡಲಿದೆ. ಹೆರೋನ್ ಮಾನವರಹಿತ ವಾಯು ವಾಹಕಗಳ ಬದಲಿಗೆ ರುಸ್ತುಂ ನ್ನು ಬಳಸಲಾಗುತ್ತಿದೆ. 

SCROLL FOR NEXT