ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಉದ್ಯಮಿ ಪುತ್ರನ ಅಪಹರಣಕಾರರನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು

ಉದ್ಯಮಿ ಸಿದ್ದರಾಜು ಅವರ ಪುತ್ರ ಮತ್ತು ಕಾರು ಚಾಲಕನನ್ನುಅಪಹರಿಸಿ 1.80 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದ ಇಬ್ಬರೂ ಆರೋಪಿಗಳನ್ನು ಕಾಲಿಗೆ ಗುಂಡಿಕ್ಕಿ ನಗರದ ಹೊರವಲಯದ ಕಡಬಗೆರೆ ಬಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಉದ್ಯಮಿ ಸಿದ್ದರಾಜು ಅವರ ಪುತ್ರ ಮತ್ತು ಕಾರು ಚಾಲಕನನ್ನುಅಪಹರಿಸಿ 1.80 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದ ಇಬ್ಬರೂ ಆರೋಪಿಗಳನ್ನು ಕಾಲಿಗೆ ಗುಂಡಿಕ್ಕಿ ನಗರದ ಹೊರವಲಯದ ಕಡಬಗೆರೆ ಬಳಿ ಪೊಲೀಸರು ಬಂಧಿಸಿದ್ದಾರೆ.

ಅಪಹರಣಕಾರ ಸಂಗುಬಾಳ ಪ್ರಶಾಂತ್, ಸತೀಶ್ ಎಂಬುವವರ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಲು ಮುಂದಾದಾಗ, ಪೊಲೀಸರ ಮೇಲೆಯೇ ಅವರು ಹಲ್ಲೆ ನಡೆಸಲು ಯತ್ನಿಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಮಾದನಾಯಕನಹಳ್ಳಿ ಇನ್ಸ್ ಪೆಕ್ಟರ್ ಸತ್ಯನಾರಾಯಣ ಆರೋಪಿಗಳ ಕಾಲಿಗೆ ಗುಂಡಿಕ್ಕಿದ್ದಾರೆ.

ಘಟನೆಯಲ್ಲಿ ಹೇಮಂತ್, ಮುರುಳಿಧರ್, ದೊಡ್ಡಬಳ್ಳಾಪುರ ಹೆಡ್ ಕಾನ್ಸ್ ಟೆಬಲ್ ಮಧು ಅವರಿಗೂ ಗಾಯಗಳಾಗಿದ್ದು, ಪೊಲೀಸ್ ಹಾಗೂ ಆರೋಪಿಗಳಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಟಿವಿಎಸ್ ಶೋ ರೂಮ್ ಮಾಲೀಕ ಸಿದ್ಧರಾಜು ಅವರ ಪುತ್ರ ಹೇಮತ್(17) ಮತ್ತು ಚಾಲಕ ಕೇಶವ್(24) ಇತ್ತೀಚಿಗೆ ನಾಪತ್ತೆಯಾಗಿದ್ದರು. ರಾಜಾನುಕುಂಟೆ ಬಳಿಯ ಆರ್ ಟಿ ನಗರ ಪಬ್ಲಿಕ್ ಶಾಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಹೇಮಂತನನ್ನು ಚಾಲಕ ಕೇಶವ್ ಅವರು ಟ್ಯೂಷನ್ ಗೆಂದು ಕಾರಿನಲ್ಲಿ ಕರೆದುಕೊಂಡು ಹೊಗಿದ್ದರು. ವಾಪಸ್ ಬರುವಾಗ ಕಾಲೇಜ್ ಬಳಿ ಕಾರು ಹತ್ತುತ್ತಿದ್ದಾಗ ದುಷ್ಕರ್ಮಿಗಳು  ಇಬ್ಬರನ್ನು ತಮ್ಮ ಕಾರಿನೊಳಗೆ ಎಳೆದುಕೊಂಡು ಪರಾರಿಯಾಗಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!