ರಾಜ್ಯ

ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಅಜರುದ್ದೀನ್ ನಾಮಪತ್ರ ಸಲ್ಲಿಕೆ

Nagaraja AB

ಹೈದ್ರಾಬಾದ್: ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಟೀಂ ಇಂಡಿಯಾ ನಾಯಕ ಮೊಹಮ್ಮದ್ ಅಜರುದ್ದೀನ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 27 ರಂದು ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆ ನಡೆಯಲಿದ್ದು,ಚುನಾವಣಾ ಆಯುಕ್ತ ವಿಎಸ್ ಸಂಪತ್ ಅವರಿಗೆ  ಅಜರುದ್ದೀನ್ ನಾಮಪತ್ರವನ್ನು ಸಲ್ಲಿಸಿದ್ದಾರೆ. 

2017ರಲ್ಲಿ ಅಜರುದ್ದೀನ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಆದರೆ, ಎರಡು ವರ್ಷಗಳ ಬಳಿಕ ಮತ್ತೆ  ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

56 ವರ್ಷದ ಅಜರುದ್ದೀನ್  99 ಟೆಸ್ಟ್ ಹಾಗೂ 334 ಏಕದಿನ ಪಂದ್ಯಗಳನ್ನು ಆಡಿದ್ದು, ಟೆಸ್ಟ್ ನಲ್ಲಿ 6215 , ಏಕದಿನ ಪಂದ್ಯದಲ್ಲಿ 9, 378 ರನ್ ಗಳನ್ನು ಗಳಿಸಿದ್ದಾರೆ. 

1990ರ ದಶಕದಲ್ಲಿ ಭಾರತದ 47 ಟೆಸ್ಟ್ ಹಾಗೂ 174 ಏಕದಿನ ಪಂದ್ಯಗಳ ನಾಯಕರಾಗಿ ಮೊಹಮ್ಮದ್ ಅಜರುದ್ದೀನ್ ತಂಡವನ್ನು ಮುನ್ನಡೆಸಿದ್ದಾರೆ. ಆದಾಗ್ಯೂ, ಮ್ಯಾಚ್ ಫಿಕ್ಸಿಂಗ್ ಹಗರಣದಿಂದಾಗಿ ಅವರ ವೃತ್ತಿಬದುಕು ಕಿರು ಅವಧಿಯಿಂದ ಕೂಡಿತ್ತು.

ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡ ನಂತರ ಅವರನ್ನು ಜೀವಿತಾವಧಿವರೆಗೂ ಕ್ರಿಕೆಟ್ ಆಡದಂತೆ ಬಿಸಿಸಿಐ ಬ್ಯಾನ್ ಮಾಡಿತ್ತು. ಆದಾಗ್ಯೂ, 2012ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಈ ನಿರ್ಬಂಧವನ್ನು ಕಾನೂನು ಬಾಹಿರವೆಂದು ಪರಿಗಣಿಸಿತ್ತು.2009ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊರಾದಾಬಾದ್ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. 

SCROLL FOR NEXT