ಸಾಂದರ್ಭಿಕ ಚಿತ್ರ 
ರಾಜ್ಯ

ಕೊಳ್ಳೇಗಾಲ: ನಾಲೆ ಒಡೆದು ಊರಿಗೆ ನುಗ್ಗಿದ ನೀರು; ಅಪಾರ ಬೆಳೆ ಹಾನಿ

ರಾಜ್ಯದಲ್ಲಿ  ಕಳೆದೆರಡು ದಿನಗಳಿಂದ  ಸುರಿದ ಧಾರಾಕಾರ ಮಳೆಗೆ ನಾಲೆ ತುಂಬಿ ಒಡೆದ ಪರಿಣಾಮ ತಾಲೂಕಿನ ಹೊಂಡರಬಾಳು ಗ್ರಾಮಕ್ಕೆ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ.

ಕೊಳ್ಳೇಗಾಲ: ರಾಜ್ಯದಲ್ಲಿ  ಕಳೆದೆರಡು ದಿನಗಳಿಂದ  ಸುರಿದ ಧಾರಾಕಾರ ಮಳೆಗೆ ನಾಲೆ ತುಂಬಿ ಒಡೆದ ಪರಿಣಾಮ ತಾಲೂಕಿನ ಹೊಂಡರಬಾಳು ಗ್ರಾಮಕ್ಕೆ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ.

ಹೊಂಡರಬಾಳು ಗ್ರಾಮದ ನಾಲೆಯಲ್ಲಿ ಮಳೆ ನೀರು ಹಾಗೂ ಕಬಿನಿ ನಾಲೆ ನೀರು ಹೆಚ್ಚಾದ ಹಿನ್ನೆಲೆ ನಾಲೆ ಒಡೆದು ತಗ್ಗು ಪ್ರದೇಶದ ಜಮೀನುಗಳಿಗೆ ನೀರು ಹರಿದಿದೆ. ಪರಿಣಾಮ ಕಳೆದೊಂದು ವಾರದಿಂದ ನಾಟಿ ಮಾಡಿದ್ದ ನೂರಾರು ಎಕೆರೆ ಭತ್ತದ ಪೈರುಗಳು ಸಂಪೂರ್ಣ ಜಲಾವೃತಗೊಂಡಿವೆ.

ಕೆಲ ಜಮೀನುಗಳಿಗೆ ರಭಸವಾಗಿ ನೀರು ನುಗ್ಗಿದ ಪರಿಣಾಮ ಭತ್ತದ ಪೈರುಗಳು ಕೊಚ್ಚಿ ಹೋಗಿವೆ. ರೈತರು ತಮ್ಮ ಜಮೀನಿಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಹರ ಸಾಹಸಪಡುತ್ತಿದ್ದ ದೃಶ್ಯ ಕಂಡು ಬಂತು.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳು ನಮಗೆ ಬೇಕು ಎಂದಾಗ ಬೆಳೆಗೆ ನೀರು ಪೂರೈಸುವುದಿಲ್ಲ. ಬೇಡ ಎಂದಾಗ ನಾಲೆಯನ್ನು ಭದ್ರಪಡಿಸುವುದಿಲ್ಲ. ನಾಲೆಯಲ್ಲಿ ಗಿಡ-ಗಂಟಿ ಸೇರಿದಂತೆ ಸಮರ್ಪಕವಾಗಿ ಹೂಳೆತ್ತಿಸದ ಹಿನ್ನೆಲೆ ಮಳೆ ನೀರು ಸರಾಗವಾಗಿ ಹರಿಯದೆ ಜಮೀನುಗಳಿಗೆ ನುಗ್ಗಿದೆ’ ಎಂದು ರೈತರು ದೂರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!

ನಿಂಬೆಹಣ್ಣು ಕತ್ತರಿಸಿ, ಮಳೆ ನಿಲ್ಲಿಸಿದೆ: ವಿವಾದವನ್ನು ಮೈ ಮೇಲೆ ಎಳೆದುಕೊಂಡ ಬಿಜೆಪಿ ಸಂಸದ! ಕಾಂಗ್ರೆಸ್, ನೆಟ್ಟಿಗರ ಲೇವಡಿ