ಸುರೇಶ್ ಕುಮಾರ್ 
ರಾಜ್ಯ

ಸಾರ್ವಜನಿಕರ ದೂರಿನ ಮೇರೆಗೆ ಪುಣಜನೂರು ಚೆಕ್‌ಪೋಸ್ಟ್‌ಗೆ ಸಚಿವ ಸುರೇಶ್‌ಕುಮಾರ್ ದಿಢೀರ್ ಭೇಟಿ

ಗಡಿ ಜಿಲ್ಲೆ ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪುಣಜನೂರು ಚೆಕ್‌ಪೋಸ್‌ಟ್ ಬಗ್ಗೆ ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ದಿಢೀರ್ ಭೇಟಿ ನೀಡಿದರು.

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪುಣಜನೂರು ಚೆಕ್‌ಪೋಸ್‌ಟ್ ಬಗ್ಗೆ ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ದಿಢೀರ್ ಭೇಟಿ ನೀಡಿ, ಕೊರೊನಾ ಸೊಂಕನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಕ್ರಮಗಳನ್ನು ಖುದ್ದು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆಯೇ, ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆಯೇ, ರಾಜ್ಯಕ್ಕೆ ಆಗಮಿಸಿದ ವಾಹನಗಳನ್ನು ಕಡ್ಡಾಯವಾಗಿ ನೊಂದಣಿ ಪುಸ್ತಕದಲ್ಲಿ ನಮೂದಿಸಲಾಗುತ್ತಿದೆಯೇ, ಜೊತೆಗೆ ಕೊರೊನಾ ಸೊಂಕಿನ ಬಗ್ಗೆ ಆರೋಗ್ಯ ತಪಾಸಣೆ ಮಾಡಿ ಬಿಡಲಾಗುತ್ತಿದೇಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಅಧಿಕಾರಿಗಳನ್ನು ಪ್ರಶ್ನಿಸುವುದರ ಮೂಲಕ ಉತ್ತರ ಕಂಡುಕೊಂಡು ಸ್ಥಳದಲ್ಲಿಯೇ ಕೆಲವೊಂದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ ಸಚಿವರು, ಅಗ್ನಿಶಾಮಕದಳದ ವಾಹನ ರಾಜ್ಯದೊಳಗೆ ನುಸುಳುವ ಅಗತ್ಯ ಸೇವೆಗಳ ವಾಹನಗಳನ್ನು ಸ್ಯಾನಿಟೈಸ್ ಮಾಡಿ ಬಿಡುತ್ತಿರುವುದರ ಬಗ್ಗೆ ಸ್ವಲ್ಪ ಹೊತ್ತು ನಿಂತು ಪರಿಶೀಲಿಸಿದರು. ನಂತರ ಆರೋಗ್ಯಾಧಿಕಾರಿಗಳಿಂದ ಜ್ವರ ಪರಿಶೀಲನೆ ಮಾಡಿಸಿಕೊಂಡ ಸಚಿವರು ಸ್ಥಳದಲ್ಲಿದ್ದ, ಶಾಸಕ ಎನ್ ಮಹೇಶ್‌ರವರ ಆರೋಗ್ಯ ತಪಾಸಣೆಯನ್ನು ಯಂತ್ರದ ಮೂಲಕ ಸಚಿವರು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸುವ ಅಗತ್ಯ ಸೇವೆಗಳ ವಾಹನಗಳನ್ನು ತಪಾಸಣೆ ಮಾಡುವುದರ ಮೂಲಕ ರಾಜ್ಯದೊಳಗೆ ಪ್ರತಿಯೊಂದು ವಾಹನವನ್ನು ಸ್ಯಾನಿಟೈಸ್ ಮಾಡಿ ಬಿಡಲಾಗುತ್ತಿದೆ. ಜೊತೆಗೆ ಇನ್ಮುಂದೆ ತಮಿಳುನಾಡಿನಿಂದ ಆಗಮಿಸುವ ವಾಹನ ಚಾಲಕರು ಕಡ್ಡಾಯವಾಗಿ ಅಲ್ಲಿನ ಆರೋಗ್ಯ ಇಲಾಖೆಯಿಂದ ಆರೋಗ್ಯ ದೃಢಿಕರನ ಪ್ರಮಾಣ ಪತ್ರ ತಂದರೆ ಮಾತ್ರ ರಾಜ್ಯದೊಳಗೆ ಪ್ರವೇಶ ನೀಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜೊತೆಗೆ ಮೈಸೂರಿನಂತೆ ಚಾಮರಾಜನಗರದ ಪುಣಜನೂರು ಹಾಗೂ ಮೂಲೆಹೊಳೆ ಚೆಕ್‌ಪೋಸ್‌ಟ್ಗಳಲ್ಲಿ ಔಷಧ ಸಿಂಪಡಣೆಯ ಟನಲ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು ನಂಜನಗೂಡಿನ ಜುಬಿಲಿಯನ್‌ಟ್ ಕಾರ್ಖಾನೆಯ ಪ್ರಕರಣ ಹಾಗೂ ದೆಹಲಿಯ ಮುಜಾಉದ್ದೀನ್ ಪ್ರಕರಣಗಳು ರಾಜ್ಯದಲ್ಲಿ ಕೊರೊನಾ ಸೊಂಕು ದ್ವಿಗುಣಗೊಳ್ಳಲು ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದು ತಹಬದಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು,  ಇಂದು ರಾತ್ರಿ ಪ್ರಧಾನ ಮಂತ್ರಿ ಮೋದಿರವರು ಕರೆ ನೀಡಿರುವ 9 ನಿಮಿಷಗಳ ದೀಪ ಬೆಳಗುವ ಕಾರ್ಯಕ್ರಮ ಜನಾಂದೊಲನವಾಗಿ ರೂಪುಗೊಳ್ಳುವುದರ ಜೊತೆಗೆ ಕೊರೊನಾ ವೈರಸ್‌ನ್ನು ಹಿಮ್ಮೆಟ್ಟಿಸುವ ಒಗ್ಗಟ್ಟಿನ ಸಮರವಾಗಲಿದೆ ಎಂದು ಪುನರುಚ್ಚಿಸಿದರು. ಈ ಸಂದರ್ಭದಲ್ಲಿ ಶಾಸಕ ಎನ್ ಮಹೇಶ್ ಹಾಜರಿದ್ದರು.

ವರದಿ : ಗೂಳಿಪುರ ನಂದೀಶ ಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್