ರಾಜ್ಯ

ಲಾಕ್‌ಡೌನ್‌ ನಡುವೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್!

Raghavendra Adiga

ಬೆಂಗಳೂರು: ಕೊರೋನಾವೈರಸ್ ಹಾವಳಿ ಅತಿಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ ಹಾಕಲಾಗಿದ್ದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಈ ನಡುವೆ ಮದ್ಯವ್ಯಸನಿಗಳ ಹಿತದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿ ಎಂದು ಹೈಕೋರ್ಟ್ ಗೆ ಅರ್ಜಿ ಹಾಕಿದ್ದ ಹುಬ್ಬಳ್ಳಿ ಮೂಲದ ವೈದ್ಯರೊಬ್ಬರಿಗೆ ನ್ಯಾಯಾಲಯ ಹತ್ತು ಸಾವಿರ ರೂ. ದಂಡ ವಿಧಿಸಿದೆ.

ಮುಖ್ಯ ನ್ಯಾ. ಎ.ಎಸ್.ಒಕಾ, ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವೈದ್ಯರ ಅರ್ಜಿಯನ್ನು ವಜಾ ಮಾಡಿ 10 ಸಾವಿರ ರೂ. ದಂಡ ವಿಧಿಸಿದೆ.

ಹುಬ್ಬಳ್ಳಿಯ ಖ್ಯಾತ ಮನೋವೈದ್ಯರಾದ ವಿನೋದ್ ಕುಲಕರ್ಣಿ ಲಾಕ್‍ಡೌನ್ ಹೇರಲಾಗಿರುವ ಸಮಯದಲ್ಲಿ ದೇಶಾದ್ಯಂತ ಮದ್ಯ ಮಾರಾಟ ನಿಷೇಧವಿದ್ದು ಕರ್ನಾಟಕದಲ್ಲಿ ಈ ನಿಷೇಧವನ್ನು ತೆರವು ಮಾಡಬೇಕೆಂದು ಪಿಐಎಲ್ ಮೂಲಕ ಮನವಿ ಸಲ್ಲಿಸಿದರು.

ಇಂತಹ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜನರು ತಮ್ಮ ಆರೋಗ್ಯಗಳ ಬಗೆಗೆ ಕಾಳಜಿ ವಹಿಸಿಕೊಳ್ಳಬೇಕು. ಅಂತಹುದರಲ್ಲಿ ವೈದ್ಯರಾಗಿ ಮದ್ಯಪಾನಿಗಳ ಪರ ಅರ್ಜಿ ಸಲ್ಲಿಸಿದ್ದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ. 

SCROLL FOR NEXT