ಸಂಗ್ರಹ ಚಿತ್ರ 
ರಾಜ್ಯ

ಕೋವಿಡ್ -19: ಯುವಕರೇ ಎಚ್ಚರ, ರಾಜ್ಯದ ರೋಗಿಗಳ ಪೈಕಿ ಅರ್ಧದಷ್ಟು ಮಂದಿ 21-40 ವರ್ಷದೊಳಗಿನವರು!

ಜಗತ್ತಿನಾದ್ಯಂತ ತಲ್ಲಣ, ಆತಂಕ ಸೃಷ್ಟಿಸಿರುವ ಮಾರಕ ಕೋವಿಡ್- 19 ಸೋಂಕಿಗೆ ತುತ್ತಾದ ರಾಜ್ಯದ ರೋಗಿಗಳ ಪೈಕಿ ಅರ್ಧದಷ್ಟು ಮಂದಿ 21-40 ವರ್ಷದೊಳಗಿನವರು ಆಗಿದ್ದಾರೆ.

ಬೆಂಗಳೂರು: ಜಗತ್ತಿನಾದ್ಯಂತ ತಲ್ಲಣ, ಆತಂಕ ಸೃಷ್ಟಿಸಿರುವ ಮಾರಕ ಕೋವಿಡ್- 19 ಸೋಂಕಿಗೆ ತುತ್ತಾದ ರಾಜ್ಯದ ರೋಗಿಗಳ ಪೈಕಿ ಅರ್ಧದಷ್ಟು ಮಂದಿ 21-40 ವರ್ಷದೊಳಗಿನವರು ಆಗಿದ್ದಾರೆ. ಕೊರೋನಾವೈರಸ್ ನಿಂದ ವಯಸ್ಸಾದವರು ಹೆಚ್ಚಾಗಿ ಅಪಾಯಕ್ಕೊಳಗಾಗುತ್ತಾರೆ ಎಂಬ ಮಾತುಗಳು ಸುಳ್ಳು ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ವಿಶ್ಲೇಷಿಸಿದಾಗ, ಒಟ್ಟಾರೇ ರಾಜ್ಯದಲ್ಲಿನ 163 ಪಾಸಿಟಿವ್ ಕೇಸ್ ಗಳ ಪೈಕಿಯಲ್ಲಿ ಶೇ. 50 ರಷ್ಟು ಅಂದರೆ 81 ಪ್ರಕರಣಗಳು ಈ ಗುಂಪಿಗೆ ಸೇರಿದವರಾಗಿದ್ದಾರೆ. ಈ ಮಾಹಿತಿಯನ್ನು ಇನ್ನೂ ವಿಶ್ಲೇಷಿಸಿಲ್ಲ, ಸಾರ್ವಜನಿಕರಿಗೆ ತಿಳಿಸಿಲ್ಲ ಎಂದು ಆರೋಗ್ಯ ಇಲಾಖೆ  ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೋಂಕು ದೃಢಪಟ್ಟಿರುವ ಶೇ. 27 ರಷ್ಟು ಪ್ರಕರಣಗಳಲ್ಲಿ 31ರಿಂದ 40 ವರ್ಷದೊಳಗಿನವರಾಗಿದ್ದಾರೆ. ಶೇ. 23 ರಷ್ಟು  ಕೇಸ್ ಗಳಲ್ಲಿ 21 ರಿಂದ 30 ವರ್ಷದೊಳಗಿನವರು, ಶೇ. 9 ರಷ್ಟು ರೋಗಿಗಳು 20 ವರ್ಷದವರು ಆಗಿದ್ದಾರೆ. ಶೇ. 24 ರಷ್ಟು ಕೇಸ್ ಗಳಲ್ಲಿ 41 ರಿಂದ 61 ವರ್ಷದೊಳಗಿನವರಾಗಿದ್ದಾರೆ.

ಇದಲ್ಲದೆ, 13 ರಿಂದ 20 ವರ್ಷದೊಳಗಿನ 12 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಶಿಶು ಸೇರಿದಂತೆ  10 ವರ್ಷದೊಳಗಿನ ಮೂವರಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿನ ಕೋವಿಡ್-19 ಪ್ರಕರಣಗಳಲ್ಲಿ  31-40 ವರ್ಷ ವಯಸ್ಸಿನವರಾಗಿದ್ದು, ಇದಕ್ಕೆ ಕಾರಣ ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ, ಇತರರಿಗಿಂತ ಯುವಕರೇ ಹೆಚ್ಚಾಗಿ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬುದಾಗಿ ವರ್ಗೀಕರಿಸಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ. 

31 ವರ್ಷದಿಂದ 40 ವರ್ಷದೊಳಗಿನವರು ಹೆಚ್ಚಾಗಿ ವಿದೇಶ ಪ್ರವಾಸ ಕೈಗೊಳ್ಳುವುದು, ವಿಶ್ರಾಂತಿಗಿಂತಲೂ ಮೊಬೈಲ್ ಗೆ ಹೆಚ್ಚಾಗಿ ಅವಲಂಬಿತರಾಗಿರುವುದು ಇದಕ್ಕೆ ಕಾರಣಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ಹೆಚ್. ಸುದರ್ಶನ್ ಬಲ್ಲಾಳ್ . 

ಧೂಮಪಾನ, ಮಧ್ಯಪಾನ, ಮಧುಮೇಹ, ಅಧಿಕ ಒತ್ತಡ ಮತ್ತಿತರ ಕಾರಣಗಳಿಂದಲೂ ಯುವಕರು ಹೆಚ್ಚಾಗಿ ಕೊರೋನಾ ಸೋಂಕಿಗೆ ತುತ್ತಾಗಲು ಕಾರಣವಾಗಿರಬಹುದೆಂದು ರಾಜೀವ್ ಗಾಂಧಿ ಎದೆ ರೋಗಗಳ ಕಾಯಿಲೆ ಸಂಸ್ಥೆ ನಿರ್ದೇಶಕ ಡಾ. ಸಿ. ಎನ್. ನಾಗರಾಜ್ ಹೇಳಿದ್ದಾರೆ. 

ರಾಜ್ಯದಲ್ಲಿನ ಕೋವಿಡ್ -19 ರೋಗಿಗಳ ಪೈಕಿಯಲ್ಲಿ 24 ಮಂದಿ  (ಶೇ. 14.7 ) 61ರಿಂದ 70 ವರ್ಷದೊಳಗಿನವರಾಗಿದ್ದಾರೆ. 4 (ಶೇ. 2.5) 71ರಿಂದ 80 ವರ್ಷದೊಳಗಿನವರಾಗಿದ್ದಾರೆ. ಈವರೆಗೂ 81 ವರ್ಷಕ್ಕೂ ಮೇಲ್ಪಟ್ಟ ಯಾವುದೇ ವ್ಯಕ್ತಿಯಲ್ಲೂ ಸೋಂಕು ಪತ್ತೆಯಾಗಿಲ್ಲ, ಸಾವನ್ನಪ್ಪಿದ್ದ ವೃದ್ಧರಲ್ಲಿ ಹೆಚ್ಚಾಗಿ ಮಧುಮೇಹ, ಕಿಡ್ನಿ, ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬುದಾಗಿ ಡಾ. ನಾಗರಾಜ್ ತಿಳಿಸಿದ್ದಾರೆ. 

ಕೊರೋನಾವೈರಸ್ ನಿಂದ ರಾಜ್ಯದಲ್ಲಿ ಮೃತಪಟ್ಟವರು 60 ವರ್ಷಕ್ಕಿಂತ ಮೇಲ್ಪಟ್ಟವರು ಆಗಿದ್ದಾರೆ. ಇದರರ್ಥ ಯುವಕರು ಹೆಚ್ಚು ಜವಾಬ್ದಾರಿಯುತವಾಗಿರಬೇಕು, ಏಕೆಂದರೆ ಅವರೊಂದಿಗೆ ವಾಸಿಸುವ ವಯಸ್ಸಾದವರಿಗೆ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಪ್ರೊಫೆಸರ್ ಅನಂತ್ ಬಾನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT