ಮೈಸೂರು: ಮಹಾಮಾರಿ ಕೊರೋನಾ ವೈರಸ್ ಹಾವಳಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ಲೇ ಇದ್ದು, ಇತ್ತೀಚೆಗಷ್ಟೇ ಮೈಸೂರು ಮೂಲದ ಮಹಿಳೆ ಹಾಗೂ ಆಕೆಯ ಮಗುವಿನಲ್ಲಿ ವೈರಸ್ ದೃಢಪಟ್ಟಿದ್ದು. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತಾಯಿ ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಸೋಂಕಿಗೊಳಗಾಗುವ ಮಕ್ಕಳು ಅತ್ಯಂತ ಅಪಾಯದಲ್ಲಿರುತ್ತಾರೆ. ಹೀಗಾಗಿ ಮಕ್ಕಳಿಗಾಗಿಯೇ ಪ್ರತ್ಯೇಕ ವಾರ್ಡ್ ಸ್ಥಾಪನೆ ಮಾಡುವುದರಿಂದ, ಸಹಾಯಕವಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
ತಾಯಿ ಹಾಗೂ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಈ ವಾರ್ಡ್ ಗಳಲ್ಲಿ ಮಾಡಲಾಗಿರುತ್ತದೆ. ತಾಯಿಯಂದಿರಿಗೆ ಕೌನ್ಸಿಲಿಂಗ್ ವ್ಯವಸ್ಥೆ ಕೂಡ ಈ ವಾರ್ಡ್ ನಲ್ಲಿರುತ್ತದೆ ಎಂದು ತಿಳಿದುಬಂದಿದೆ.
ಈಗಾಗಲೇ ಸ್ವಯಂಪ್ರೇರಿತ ವಿಶೇಷ ಗುಂಪೊಂದನ್ನು ಆಡಳಿತ ಮಂಡಳಿ ರಚನೆ ಮಾಡಿದ್ದು, ಇದರಲ್ಲಿ ಆಶಾ ಕಾರ್ಯಕರ್ತರು ಸೋಂಕಿತ ಪೋಷಕರ ಮಕ್ಕಳನ್ನು ಆರೈಕೆ ಮಾಡಲಿದ್ದಾರೆ. ಇದೇ ರೀತಿಯ ಕಾರ್ಯಕರ್ತರನ್ನು ವಯೋವೃದ್ಧರನ್ನು ಹಾಗೂ ವಿಕಲಚೇತನರನ್ನು ನೋಡಿಕೊಳ್ಳಲು ಕೂಡ ನಿಯೋಜಿಸಲಾಗುತ್ತದೆ.