ಬಾಗಲಕೋಟೆ: ಲಾಕ್‌ಡೌನ್‌ನಿಂದ ರಸ್ತೆ ಬಂದ್, ಚಿಕಿತ್ಸೆ ಸಿಗದೆ ವೃದ್ದೆ ಸಾವು 
ರಾಜ್ಯ

ಬಾಗಲಕೋಟೆ: ಲಾಕ್‌ಡೌನ್‌ನಿಂದ ರಸ್ತೆ ಬಂದ್, ಚಿಕಿತ್ಸೆ ಸಿಗದೆ ವೃದ್ದೆ ಸಾವು

ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ನಿಂದ ಕಾರಣ ಮನೆಯಿಂದ ಜನ ಹೊರ ಬರುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಗ್ರಾಮಕ್ಕೆ ಬರುವ ರಸ್ತೆಗಳನ್ನೇ ಅಗೆದು ಹಾಕಲಾಗಿದ್ದು ಹೊರ ಪ್ರದೇಶದವರು ಗ್ರಾಮಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ರಸ್ತೆ ಅಗೆದಿದ್ದ ಕಾರಣಕ್ಕೆ ಗ್ರಾಮದ ಅನಾರೋಗ್ಯಪೀಡಿತ ವೃದ್ದೆಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕದೆ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ

ಬಾಗಲಕೋಟೆ: ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ನಿಂದ ಕಾರಣ ಮನೆಯಿಂದ ಜನ ಹೊರ ಬರುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಗ್ರಾಮಕ್ಕೆ ಬರುವ ರಸ್ತೆಗಳನ್ನೇ ಅಗೆದು ಹಾಕಲಾಗಿದ್ದು ಹೊರ ಪ್ರದೇಶದವರು ಗ್ರಾಮಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ರಸ್ತೆ ಅಗೆದಿದ್ದ ಕಾರಣಕ್ಕೆ ಗ್ರಾಮದ ಅನಾರೋಗ್ಯಪೀಡಿತ ವೃದ್ದೆಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕದೆ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ತೇರದಾಳ ಪಟ್ಟಣದ ನಿರ್ಮಲಾ ತೆಳಗಿನಮನಿ (61) ಎಂಬುವ ಮಹಿಳೆ ಸಾವನ್ನಪ್ಪಿದ್ದಾರೆ. 

ಹೃದಯ ಸಮಸ್ಯೆಯ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದ ವೃದ್ದೆಯನ್ನು ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಬೆಳಗಾವಿಯ ಹಾರೋಗೇರಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗದ ಮಧ್ಯೆ ಮುಖ್ಯ ರಸ್ತೆಯನ್ನು ಅಗೆದಿದ್ದು ಕಾರು ಸಂಚರಿಸಲು ಸಾಧ್ಯವಾಗಿಲ್ಲ. ಬಳಿಕ ಒಳ ರಸ್ತೆಗಳ ಮೂಲಕ ಆಸ್ಪತ್ರೆಗೆ ಸಾಗಲು ಪ್ರಯತ್ನಿಸಿದರೂ ಅವೆಲ್ಲವೂ ಬಂದ್ ಆಗಿತ್ತು.

ಸುಮಾರು ಎರಡು ಗಂಟೆಗಳ ಕಾಲ ಆಸ್ಪತ್ರೆಗೆ ತಲುಪುವ ಮಾರ್ಗದ ಹುಡುಕಾಟ ನಡೆದರೂ ವೃದ್ದೆಯನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿಲ್ಲ. ಪರಿಣಾಮ ಅವರಿಗೆ ತೀವ್ರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಘಟನೆಗೆ ರಸ್ತೆ ಅಗೆದಿರುವ ತಾಲೂಕು ಆಡಳಿತವೇ ಕಾರಣವೆಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT