ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ರಾಜ್ಯದಲ್ಲಿ ಹೊಸದಾಗಿ ಮೂವರು ಮಕ್ಕಳಿಗೆ ಸೇರಿ 15 ಜನರಿಗೆ ಕೊರೋನಾ ಪಾಸಿಟಿವ್; ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆ

ಕರ್ನಾಟಕದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು ಇಂದು ಮತ್ತೆ 15 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂವರು ಮಕ್ಕಳು ಕೂಡ ಸೇರಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 13 Apr 2020, 2:42 pm

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು ಇಂದು ಮತ್ತೆ 15 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂವರು ಮಕ್ಕಳು ಕೂಡ ಸೇರಿದ್ದಾರೆ.

ರಾಜ್ಯದಲ್ಲಿ 8, 14 ಹಾಗೂ 16 ವರ್ಷದ ಮಕ್ಕಳಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ 15 ಹೊಸ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೇರಿಕೆಯಾಗಿದೆ.

ಪ್ರಮುಖವಾಗಿ ಧಾರವಾಡದಲ್ಲಿ 4 ಪ್ರಕರಣಗಳು ದಾಖಲಾಗಿದ್ದು, ಮಳವಳ್ಳಿಯಲ್ಲಿ 3, ಬೀದರ್ ನಲ್ಲಿ 2, ಬಾಗಲಕೋಟೆಯಲ್ಲಿ 1, ಬೆಳಗಾವಿಯ ರಾಯಭಾಗದಲ್ಲಿ, ದೊಡ್ಡಬಳ್ಳಾಪುರದಲ್ಲಿ 1 ಹಾಗೂ ಬೆಂಗಳೂರು ನಗರದ 1 ಪ್ರಕರಣ ವರದಿಯಾಗಿದೆ. 

Advertisement

Advertisement

ಮಂಡ್ಯ ಮಳವಳ್ಳಿಯ 8 ವರ್ಷದ ಹೆಣ್ಣು ಮಗು, 18 ವರ್ಷದ ಯುವಕ ಮತ್ತು 60 ವರ್ಷದ ವೃದ್ಧರಲ್ಲಿ ವೈರಸ್ ಸೋಂಕು ದೃಢವಾಗಿದ್ದು, ಹುಬ್ಬಳ್ಳಿ-ಧಾರವಾಡದ 55 ಮತ್ತು 36 ವರ್ಷದ ಗಂಡು ಮತ್ತು 60 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಅಂತೆಯೇ ಬಾಗಲಕೋಟೆಯ  ಮುಧೋಳದ 27 ವರ್ಷದ ಯುವಕನಲ್ಲಿ, ಬೀದರ್ ನಲ್ಲಿ 16 ಮತ್ತು 35 ವರ್ಷದ ಮಹಿಳೆ, ಬೆಳಗಾವಿಯ ರಾಯಭಾಗದಲ್ಲಿ 20, 14, 45 ವರ್ಷದ ವ್ಯಕ್ತಿಗಳು, ದೊಡ್ಡಬಳ್ಳಾಪುರದಲ್ಲಿ 39 ವರ್ಷದ ಗಂಡು, ಬೆಂಗಳೂರು ನಗರದ 62 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು  ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement