ಆಯುಕ್ತ ಭಾಸ್ಕರ್ ರಾವ್ 
ರಾಜ್ಯ

ಲಾಕ್ ಡೌನ್ ವಿಸ್ತರಣೆ , ಪೊಲೀಸ್ ಸಿಬ್ಬಂದಿಗೆ ಕಮೀಷನರ್ ಭಾಸ್ಕರ್ ರಾವ್ ಸೂಚನೆ

ಕೊರೊನ ಹಿನ್ನಲೆಯಲ್ಲಿ ದೇಶಾದ್ಯಂತ ಜಾರಿ ಗೊಳಿಸಲಾಗಿದ್ದ ಲಾಕ್ ಡೌನ್ ನಾಳೆಗೆ ಮುಕ್ತಾಯವಾಗಲಿದೆಯದರೂ ಮತ್ತೆ ಎರಡು ವಾರಗಳ ಮಟ್ಟಿಗೆ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ .

ಬೆಂಗಳೂರು:  ಕೊರೊನ ಹಿನ್ನಲೆಯಲ್ಲಿ ದೇಶಾದ್ಯಂತ ಜಾರಿ ಗೊಳಿಸಲಾಗಿದ್ದ ಲಾಕ್ ಡೌನ್ ನಾಳೆಗೆ ಮುಕ್ತಾಯವಾಗಲಿದೆಯದರೂ ಮತ್ತೆ ಎರಡು ವಾರಗಳ ಮಟ್ಟಿಗೆ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ .

ಈ ನಿಟ್ಟಿನಲ್ಲಿ 2 ನೇ ಹಂತದ ಲಾಕ್ ಡೌನ್ ಬಗ್ಗೆ ಕಟ್ಟು ನಿಟ್ಟಾದ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದ್ದು ಈ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಸಿಬ್ಬಂದಿಗೆ ಹಲವು ಸೂಚನೆ ನೀಡಿದ್ದಾರೆ.

ಪೋಲೀಸರಿಗೆ ಭಾಸ್ಕರ್ ರಾವ್ ನೀಡಿರುವ ಪ್ರಮುಖ ಸೂಚನೆಗಳು ಹೀಗಿದೆ-

  • ಎಲ್ಲಾ ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡಿ, ಎಲ್ಲರ ಕಡೆಯಿಂದ ಪ್ರಶಂಸೆ ಪಡೆದಿದ್ದೇವೆ.
  • ಇನ್ನು ಉಳಿದ ದಿನಗಳಲ್ಲಿ ಕೂಡ ನಾವು ಹೀಗೆ ಕೆಲಸ‌ ಮಾಡಬೇಕು, ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು.
  • ಮಾಧ್ಯಮದವರಿಗೆ, ಹಣ್ಣು ತರಕಾರಿ, ದಿನಸಿ ತರುವವರಿಗೆ ಸಮಸ್ಯೆ ಮಾಡಬಾರದು.
  • ಗೂಡ್ಸ್ ವಾಹನಗಳಿಗೆ ಯಾವುದೇ ತೊಂದರೆ ಆಗಬಾರದು, ಖಾಲಿ ವಾಹನ ಇರಲಿ, ತುಂಬಿದ ವಾಹನ ಇರಲಿ. ಅವರಿಗೆ ಸಮಸ್ಯೆ ಮಾಡಬಾರದು.
  • ಮಾರ್ಕೆಟ್​ಗಳಿಗೆ ಬರುವ ಹಮಾಲಿಗಳಿಗೆ ತೊಂದರೆ ಕೊಡಬಾರದು.
  • ಕೆಲವರು ಪಾಸ್ ಇಲ್ಲದೆ ತುರ್ತಾಗಿ ಓಡಾಡಬೇಕಾಗಿರುತ್ತೆ, ಅಂತಾ ಸಮಯದಲ್ಲಿ ಸಾಮಾಜ್ಯಜ್ಞಾನ ಬಳಸಿ ನಿರ್ಧಾರ ಕೈಗೊಳ್ಳಬೇಕು. ಗರ್ಭಿಣಿಯರು, ಅನಾರೋಗ್ಯಕ್ಕೆ ಒಳಗಾದವರು ಬಂದಾಗ ಸಹನೆಯಿಂದ ಮಾತನಾಡಿಸಿ ಸಹಾಯ ಮಾಡಿ.
  • ಎಟಿಎಂ ಕೆಲಸದವರಿಗೆ, ಸರ್ಕಾರಿ ಅಧಿಕಾರಿಗಳು, ಪ್ರವೈಟ್ ಸೆಕ್ಯೂರಿಟಿ ಎಸೆನ್ಸಿಯಲ್ ಸರ್ವಿಸ್ ಅವರಿಗೆ ತೊಂದರೆ ಕೊಡಬಾರದು.
  • ನಕಲಿ‌ ಪಾಸ್ ಮಾಡಿಕೊಂಡು ಓಡಾಡುವರ ವಿರುದ್ದ ಸೂಕ್ತ ಕ್ರಮ‌ ಜರುಗಿಸಿ. ಹಾಗೂ ಲಾಕ್ ಡೌನ್ ಮುಗಿದ ಬಳಿಕ ವಾಹನ ವಾಪಸ್ ನೀಡಲು ದಾಖಲಾತಿಗಳನ್ನು ಮಾಡಿಕೊಳ್ಳಿ.
  • ಸಾರ್ವಜನಿಕರಿಗೆ ನಮ್ಮ‌ ಮೇಲೆ ನೀರಿಕ್ಷೆ ಇದೆ. ನೀವು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೀರ. ನಿಮ್ಮ ಆರೋಗ್ಯ ಕಾಪಾಡಿಕೊಂಡು ಕೆಲಸ ಮಾಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel