ಕದಿರೇನಹಳ್ಳಿಯ ಮನೋಜ್ ಕೊಲೆ: ಐವರು ಕೊಲೆ ಆರೋಪಿಗಳ ಬಂಧನ
ಕದಿರೇನಹಳ್ಳಿಯ ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಬೆಂಗಳೂರು: ಕದಿರೇನಹಳ್ಳಿಯ ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದ್ದಾರೆ.
ರಜತ್ ಅಲಿಯಾಸ್ ರಜಿ, ವರುಣ್ ಅಲಿಯಾಸ್ ಮೆಡ್ಡ ಶ್ರೀನಿವಾಸ್ ಅಲಿಯಾಸ್ ಸೀನ ನವೀನ, ಹಾಗೂ ಗುರು ಎಂಬಾತನ್ನು ಬಂಧಿಸಿರುವ ಸುಬ್ರಮಣ್ಯಪುರ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದರು.
ವಿಚಾರಣೆ ವೇಳೆ ಆರೋಪಿಗಳು, ತಾವು ಮುಕುಂದನನ್ನು ಕೊಲೆ ಮಾಡಲು ತೆರಳಿದ್ದಾಗ ಬಹಳ ಕತ್ತಲೆ ಇದ್ದ ಕಾರಣ ಮನೋಜನನ್ನು ಮುಕುಂದನ ಗ್ಯಾಂಗ್ ಎಂದು ಭಾವಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದೆವು. ನಂತರ ಆತ ತಮ್ಮ ಗ್ಯಾಂಗ್ ನ ಮನೋಜ್ ಎಂದು ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೆವು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಮೃತಪಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.